ADVERTISEMENT

ಭಾರತದಲ್ಲಿ ಧಾರ್ಮಿಕ ಹಿಂಸೆ ಕೊನೆಗೊಳ್ಳಲಿ– ವಿಶ್ವಸಂಸ್ಥೆ ಆಶಯ

ಪಿಟಿಐ
Published 15 ಜೂನ್ 2022, 12:52 IST
Last Updated 15 ಜೂನ್ 2022, 12:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದ ಭಾರತದಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ಎಲ್ಲ ರೀತಿಯ ಹಿಂಸಾಚಾರಗಳು ವಿಶೇಷವಾಗಿ ಧಾರ್ಮಿಕ ಭಿನ್ನತೆ ಮತ್ತು ಹಗೆತನಕ್ಕೆ ಸಂಬಂಧಿಸಿದ ಹಿಂಸಾಚಾರಗಳು ಅಂತ್ಯವಾಗಬೇಕು ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರ‍್ರಸ್ ಅವರ ವಕ್ತಾರಸ್ಟೀಫನ್ ಡುಜಾರ್‍ರಿಕ್ ಸಲಹೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಟೆರ‍್ರಸ್ ಅವರು ಧಾರ್ಮಿಕತೆಗೆ ಪೂರ್ಣ ಗೌರವ ನೀಡುತ್ತಾರೆ ಎಂದು ಹೇಳಿದರು.

ಈ ವೇಳೆ ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ಬಳಿಕ ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ವಿಶ್ವಸಂಸ್ಥೆಯ ನಿಲುವು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗಾಗಲೇ ತಿಳಿಸಿದಂತೆ ಧರ್ಮದ ಬಗ್ಗೆ ನಮಗೆ ಗೌರವವಿದೆ. ಯಾವುದೇ ರೀತಿಯ ದ್ವೇಷವನ್ನು ವಿರೋಧಿಸುತ್ತೇವೆ. ಎಲ್ಲ ರೀತಿಯ ಹಿಂಸಾಚಾರಗಳು ನಿಲ್ಲಬೇಕು. ವಿಶೇಷವಾಗಿ ಧಾರ್ಮಿಕತೆಗೆ ಸಂಬಂಧಿಸಿದ್ದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.