ವಿಶ್ವಸಂಸ್ಥೆ: ಕಾಂಗೊದಲ್ಲಿ ನಿಯೋಜಿಸಲಾಗಿದ್ದ ಶಾಂತಿ ಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುವಾಗ ಹುತಾತ್ಮರಾದ ಭಾರತೀಯ ಯೋಧ ಜಿತೇಂದ್ರ ಕುಮಾರ್ ಅವರಿಗೆ ವಿಶ್ವಸಂಸ್ಥೆಯು ಮರಣೋತ್ತರವಾಗಿ ‘ಡ್ಯಾಗ್ ಹ್ಯಾಮರ್‌ಸ್ಕೋಲ್ಡ್ ಪದಕ’ ನೀಡಿ ಗೌರವಿಸಲಿದೆ.
ಶುಕ್ರವಾರ (ಮೇ 24) ನಡೆಯಲಿರುವ ವಿಶ್ವಸಂಸ್ಥೆಯ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನಾಚರಣೆಯಲ್ಲಿ ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ. ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು ಹುತಾತ್ಮ ಯೋಧನ ಪರವಾಗಿ ಈ ಪದಕವನ್ನು ಸ್ವೀಕರಿಸುವರು.
ವಿವಿಧ ದೇಶಗಳಲ್ಲಿ ಶಾಂತಿ ಪಾಲನೆಗಾಗಿ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಹುತಾತ್ಮರಾದ ಯೋಧರು, ಪೊಲೀಸರು ಹಾಗೂ ನಾಗರಿಕ ಸಿಬ್ಬಂದಿ ಸೇರಿದಂತೆ ಒಟ್ಟು 119 ಜನರಿಗೆ ಮರಣೋತ್ತರವಾಗಿ ಗೌರವಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.