ADVERTISEMENT

ಗಾಜಾ: ಅವಶೇಷಗಳ ವಿಲೇವಾರಿಗೆ 14 ವರ್ಷ‌ ಬೇಕಾಗಬಹುದು: ವಿಶ್ವಸಂಸ್ಥೆ

ರಾಯಿಟರ್ಸ್‌
Published 26 ಏಪ್ರಿಲ್ 2024, 15:09 IST
Last Updated 26 ಏಪ್ರಿಲ್ 2024, 15:09 IST
ವಿಶ್ವಸಂಸ್ಥೆ 
ವಿಶ್ವಸಂಸ್ಥೆ    

ಜಿನೀವಾ: ಇಸ್ರೇಲ್ ಜೊತೆಗಿನ ಯುದ್ಧದಿಂದಾಗಿ ಗಾಜಾಪ‍ಟ್ಟಿಯಲ್ಲಿ ಬೃಹತ್‌ ಪ್ರಮಾಣದಲ್ಲಿ ಸಂಗ್ರಹವಾಗಿರುವ ಅವಶೇಷಗಳನ್ನು ವಿಲೇವಾರಿ ಮಾಡಲು 14 ವರ್ಷಗಳಷ್ಟು ಬೇಕಾಗಬಹುದು ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.

‘ಯುದ್ಧದಿಂದಾಗಿ ಅಂದಾಜು 3.70 ಕೋಟಿ ಟನ್‌ ತ್ಯಾಜ್ಯ ಸಂಗ್ರಹವಾಗಿದೆ. ಸ್ಫೋಟವಾಗದೆ ಉಳಿದಿರುವ ಬಾಂಬ್‌ ಮತ್ತು ಇತರ ಸ್ಫೋಟಕಗಳ ನಿಖರ ಸಂಖ್ಯೆ ತಿಳಿಯಲು ಸಾಧ್ಯವಿಲ್ಲ. ಭೂಸೇನೆಯ ಶೇಕಡ 10ರಷ್ಟು ಶಸ್ತ್ರಾಸ್ತ್ರಗಳು ನಿಷ್ಕ್ರಿಯಗೊಂಡಿವೆ’ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಪೆಹ್ರ್‌ ಲೊಧಮ್ಮರ್‌ ತಿಳಿಸಿದ್ದಾರೆ.

‘100 ಟ್ರಕ್‌ಗಳನ್ನು ಬಳಸಿದರೂ ಗಾಜಾ ಪಟ್ಟಿಯಲ್ಲಿರುವ ಅವಶೇಷಗಳನ್ನು ವಿಲೇವಾರಿ ಮಾಡಲು 14 ವರ್ಷ ಬೇಕಾಗಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

ಗಾಜಾದ ಆರೋಗ್ಯ ಇಲಾಖೆಯ ಪ್ರಕಾರ, ಇಸ್ರೇಲ್ ದಾಳಿಯಿಂದಾಗಿ ಈವರೆಗೆ 34,305 ಪ್ಯಾಲೇಸ್ಟಿಯನ್ನರು ಮೃತಪಟ್ಟಿದ್ದು, 77,293 ಮಂದಿ ಗಾಯಗೊಂಡಿದ್ದಾರೆ. 23 ಲಕ್ಷ ಜನ ನಿರಾಶ್ರಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.