ADVERTISEMENT

ನ.18 ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ದಿನ: ವಿಶ್ವಸಂಸ್ಥೆ

ಏಜೆನ್ಸೀಸ್
Published 8 ನವೆಂಬರ್ 2022, 13:24 IST
Last Updated 8 ನವೆಂಬರ್ 2022, 13:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಪ್ರತಿ ವರ್ಷ ನವೆಂಬರ್ 18 ಅನ್ನು ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ತಡೆ ದಿನ ಎಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೋಮವಾರ ಕೈಗೊಳ್ಳಲಾಗಿದ್ದು, ಈ ನಿರ್ಣಯಕ್ಕೆ 110 ದೇಶಗಳು ಬೆಂಬಲ ವ್ಯಕ್ತಪಡಿಸಿವೆ.

ಸಿಯೆರಾ ಲಿಯೋನ್‌ನ ಅಧ್ಯಕ್ಷ ಜೂಲಿಯಸ್ ಮಾದಾ ಬಯೊ ಅವರ ಪತ್ನಿಫಾತಿಮಾ ಮಾದಾ ಬಯೋ ಅವರು ನಿರ್ಣಯವನ್ನು ಮಂಡಿಸಿದ್ದು, ಮಕ್ಕಳ ಮೇಲಿನ ಲೈಂಗಿಕ ಶೋಷಣೆಯನ್ನು ತಡೆಗಟ್ಟುವ ಅವಶ್ಯಕತೆ ಇದೆ. ಇದೊಂದು ಘೋರ ಅಪರಾಧ, ಪ್ರತಿ ವರ್ಷ ನವೆಂಬರ್ 18ರಂದು ಈ ವಿಷಯದ ಕುರಿತು ಚರ್ಚೆ, ವಿಚಾರ ವಿನಿಮಯ, ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪರಿಣಾಮ, ಶೋಷಣೆಯನ್ನು ತಡೆಗಟ್ಟುವ ಅಗತ್ಯತೆ ಕುರಿತು ಸಾರ್ವಜನಿಕರಿಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದೂ ಸಭೆಯಲ್ಲಿ ಚರ್ಚಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.