ADVERTISEMENT

ಅಮೆರಿಕ: 10 ಸಾವಿರ ದಾಟಿದ ಸಾವಿನ ಸಂಖ್ಯೆ, ಒಂದೇ ದಿನ 1150 ಬಲಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 5:09 IST
Last Updated 7 ಏಪ್ರಿಲ್ 2020, 5:09 IST
ಅಮೆರಿಕದ ಕ್ವಾರಂಟೈನ್‌ ಕೇಂದ್ರವೊಂದರ ದೃಶ್ಯ
ಅಮೆರಿಕದ ಕ್ವಾರಂಟೈನ್‌ ಕೇಂದ್ರವೊಂದರ ದೃಶ್ಯ    

ವಾಷಿಂಗ್ಟನ್‌: ಅಮೆರಿಕ ಕೋವಿಡ್‌ 19 ಹೊಡೆತಕ್ಕೆ ತತ್ತರಿಸಿ ಹೋಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಸಾವಿನ ಪ್ರಮಾಣವೂ ಅಷ್ಟೇ ವೇಗವಾಗಿ ಏರುತ್ತಿದೆ.

ಕೇವಲ 24 ಗಂಟೆಗಳಲ್ಲಿ ಅಮೆರಿಕದಲ್ಲಿ 1150 ಮಂದಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದು, ದೇಶವನ್ನು ತೀವ್ರ ಆತಂಕಕ್ಕೆ ದೂಡಿದೆ. ಇದರೊಂದಿಗೆ ಅಲ್ಲಿ ಈ ವರೆಗೆ ಸೋಂಕಿಗೆ 10,923 ಮಂದಿ ಪ್ರಾಣ ತೆತ್ತಂತಾಗಿದೆ. ನ್ಯೂಯಾರ್ಕ್‌ ನಗರದಲ್ಲಿ ಕೊರೊನಾ ವೈರಸ್‌ ಮರಣ ಮೃದಂಗ ಭಾರಿಸುತ್ತಿದ್ದು ಅಲ್ಲಿ ಈ ವರೆಗೆ 3485 ಜನ ಮೃತಪಟ್ಟಿದ್ದಾರೆ.

ಸದ್ಯ ಅಮೆರಿಕದಲ್ಲಿ ಒಟ್ಟು 368,079 ಸೋಂಕಿತರಿದ್ದಾರೆ.

ADVERTISEMENT

ಕೋವಿಡ್‌ 19 ದೇಶವನ್ನು ಭಾದಿಸುತ್ತಿರುವ ಕುರಿತು ನಿನ್ನೆಯಷ್ಟೇ ಟ್ವೀಟ್‌ ಮಾಡಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕಣ್ಣಿಗೆ ಕಾಣದ ಈ ಶತ್ರುವಿನ ಬಗ್ಗೆ ನಾವು ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಿದ್ದೇವೆ. ಅದು ಅತ್ಯಂತ ಕಷ್ಟಕರ ಮತ್ತು ಬುದ್ಧಿವಂತಿಕೆಯುಳ್ಳದ್ದು,’ ಎಂದು ಹೇಳಿದ್ದರು.
ಈ ಮಧ್ಯೆ ಕೊರೊನಾ ವೈರಸ್‌ ಭಾದಿತ ರೋಗಿಗಳ ಚಿಕಿತ್ಸೆಗಾಗಿ ಮಲೇರಿಯಾ ನಿರೋಧಕ ಔಷಧವನ್ನು ನೀಡುವಂತೆ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.