ADVERTISEMENT

ನೆನಪಿನ ಕಾಣಿಕೆಯಾಗಿ ‘ಕ್ಷಿಪಣಿ ಲಾಂಚರ್‌’!

ಕುವೈತ್‌ನಿಂದ ಪ್ರಯಾಣಿಸುತ್ತಿದ್ದ ವ್ಯಕ್ತಿ

ಏಜೆನ್ಸೀಸ್
Published 30 ಜುಲೈ 2019, 20:00 IST
Last Updated 30 ಜುಲೈ 2019, 20:00 IST
ತಪಾಸಣೆ ಸಂದರ್ಭದಲ್ಲಿ ಟಿಎಸ್‌ಎ ವಶಕ್ಕೆ ಪಡೆದ ಕ್ಷಿಪಣಿ ಲಾಂಚರ್‌
ತಪಾಸಣೆ ಸಂದರ್ಭದಲ್ಲಿ ಟಿಎಸ್‌ಎ ವಶಕ್ಕೆ ಪಡೆದ ಕ್ಷಿಪಣಿ ಲಾಂಚರ್‌   

ವಾಷಿಂಗ್ಟನ್‌: ಅಮೆರಿಕದ ವಾಷಿಂಗ್ಟನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಬ್ಯಾಗ್‌ ತಪಾಸಣೆ ವೇಳೆ ‘ಕ್ಷಿಪಣಿ
ಲಾಂಚರ್‌’(ಮಿಸೈಲ್‌ ಲಾಂಚರ್‌)ಪತ್ತೆಯಾಗಿದೆ.

ಈ ಕುರಿತುವ್ಯಕ್ತಿಯನ್ನು ವಿಚಾರಿಸಿದಾಗ, ‘ಕುವೈತ್‌ನಿಂದ ಹಿಂದಿರುಗುವ ವೇಳೆ ನೆನಪಿನ ಕಾಣಿಕೆಯಾಗಿ ಇದನ್ನು ನನಗೆ ನೀಡಲಾಗಿದೆ’ ಎಂದಿದ್ದಾರೆಎಂದು ಅಮೆರಿಕ ಸಾರಿಗೆ ಭದ್ರತಾ ಆಡಳಿತ (ಟಿಎಸ್ಎ) ವಿಭಾಗದ ವಕ್ತಾರೆ ಲೀಸಾ ಫಾರ್ಬಸ್ಟೈನ್‌ ತಿಳಿಸಿದ್ದಾರೆ.

ಘಟನೆ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಟಿಎಸ್‌ಎ, ‘ವ್ಯಕ್ತಿ ಟೆಕ್ಸಾಸ್‌ನ ಜ್ಯಾಕ್ಸನ್‌ವಿಲ್‌ನ ನಿವಾಸಿಯಾಗಿದ್ದು, ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೃಷ್ಟವಶಾತ್‌ ಕ್ಷಿಪಣಿ ಲಾಂಚರ್‌ ನಿಷ್ಕೃಯವಾಗಿತ್ತು. ಇದನ್ನು ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಲಾಗಿದೆ. ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿಲ್ಲ’ ಎಂದು ಮಾಹಿತಿ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.