ADVERTISEMENT

ಕೋವಿಡ್ ಹೋರಾಟದಲ್ಲಿ ಭಾರತಕ್ಕೆ ಅಮೆರಿಕ ಸಹಾಯ: ಸಚಿವ ಹರ್ಷವರ್ಧನ್ ಮಾತುಕತೆ

ಪಿಟಿಐ
Published 8 ಮೇ 2021, 14:54 IST
Last Updated 8 ಮೇ 2021, 14:54 IST
ಹರ್ಷವರ್ಧನ್
ಹರ್ಷವರ್ಧನ್   

ವಾಷಿಂಗ್ಟನ್: ಉಲ್ಬಣಿಸುತ್ತಿರುವ ಕೋವಿಡ್‌–19 ವಿರುದ್ಧ ಹೋರಾಡಲು ಭಾರತಕ್ಕೆ ಸಹಕರಿಸುವ ತನ್ನ ಅಚಲ ಬದ್ಧತೆಯ ಬಗ್ಗೆ ಅಮೆರಿಕ ಭರವಸೆ ವ್ಯಕ್ತಪಡಿಸಿದೆ.

ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ (ಎಚ್‌ಎಸ್‌ಎಸ್‌) ಕಾರ್ಯದರ್ಶಿ ಕ್ಸೇವಿಯರ್ ಬೆಕೆರಾ ಮತ್ತು ಭಾರತದ ಆರೋಗ್ಯ ಸಚಿವ ಹರ್ಷವರ್ಧನ್ ಅವರ ನಡುವೆ ಶುಕ್ರವಾರ ನಡೆದ ವರ್ಚುವಲ್ ಸಭೆಯಲ್ಲಿ ಕೋವಿಡ್‌–19 ನಿರ್ವಹಣೆಯಲ್ಲಿ ಬಲವಾದ ಅಡಿಪಾಯ ಹಾಕುವ ಕುರಿತು ದ್ವಿಪಕ್ಷೀಯ ಸಹಕಾರವು ನಿರ್ಣಾಯಕವಾಗಿದೆ. ಇದು ಉಭಯ ರಾಷ್ಟ್ರಗಳ ಆರೋಗ್ಯಕ್ಕಾಗಿ ಮಾತ್ರವಲ್ಲ ಜಾಗತಿಕ ಪ್ರತಿಕ್ರಿಯೆಗೆ ನಿರ್ಣಾಯಕವೂ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಭಾರತದಲ್ಲಿ ಉಲ್ಬಣಿಸುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಈ ಬಿಕ್ಕಟ್ಟಿನ ಸಮಯಲ್ಲಿ ಭಾರತಕ್ಕೆ ಅಮೆರಿಕವು ತನ್ನ ಬಲವಾದ ಬೆಂಬಲವನ್ನು ವ್ಯಕ್ತಪಡಿಸುವ ಕುರಿತು ಪುನರುಚ್ಚಿಸಿತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ತುರ್ತಾಗಿ ಅಗತ್ಯವಿರುವ ಸಂಪನ್ಮೂಲಗಳನ್ನು ಅಮೆರಿಕ ಒದಗಿಸಿದ್ದನ್ನು ಹರ್ಷವರ್ಧನ್ ಶ್ಲಾಘಿಸಿದರು.

ADVERTISEMENT

ಆಮ್ಲಜನಕ ಟ್ಯಾಂಕ್‌ಗಳು, ಆಮ್ಲಜನಕ ಉತ್ಪಾದಕಗಳು, ಲಸಿಕಾ ಉತ್ಪಾದನಾ ಘಟಕಗಳು, ಪಿಪಿಇ ಮತ್ತು ಇತರ ತ್ವರಿತ ರೋಗ ನಿರ್ಣಾಯಕ ಪರಿಕರಗಳನ್ನು ಅಮೆರಿಕವು ಒದಗಿಸಿದೆ ಎಂದು ಹರ್ಷವರ್ಧನ್ ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಕಾರ್ಯನಿರ್ವಾಹಯ ಮಂಡಳಿಯ ಅಧ್ಯಕ್ಷರಾಗಿರುವ ಹರ್ಷವರ್ಧನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಅಮೆರಿಕ ಎದುರು ನೋಡುತ್ತಿದೆ ಎಂದು ಎಚ್‌ಎಸ್‌ಎಸ್‌ ಕಾರ್ಯದರ್ಶಿ ಕ್ಸೇವಿಯರ್ ಬೆಕೆರಾ ಒತ್ತಿ ಹೇಳಿದರು.

ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಬೆಕೆರಾ ಅವರನ್ನು ಹರ್ಷವರ್ಧನ್ ಅವರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.