ADVERTISEMENT

H1–B ವೀಸಾ ಶುಲ್ಕ ₹88 ಲಕ್ಷ: ಕೋರ್ಟ್‌ನಲ್ಲಿ ಅಮೆರಿಕದ ಉದ್ಯಮಿಗಳಿಂದ ಮೊಕದ್ದಮೆ

ಪಿಟಿಐ
Published 17 ಅಕ್ಟೋಬರ್ 2025, 14:23 IST
Last Updated 17 ಅಕ್ಟೋಬರ್ 2025, 14:23 IST
   

ವಾಷಿಂಗ್ಟನ್‌: ಎಚ್‌–1ಬಿ ವೀಸಾ ಅರ್ಜಿ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಸುಮಾರು ₹88 ಲಕ್ಷ) ಏರಿಸುವ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರದ ನಿರ್ಧಾರದ ವಿರುದ್ಧ ಅಮೆರಿಕದ ಚೇಂಬರ್‌ ಆಫ್‌ ಕಾಮರ್ಸ್‌ ದೂರು ದಾಖಲಿಸಿದೆ.

ಸರ್ಕಾರದ ನಿರ್ಣಯವು ದಾರಿ ತಪ್ಪಿದ ಮತ್ತು ಕಾನೂನುಬಾಹಿರ ಕ್ರಮ ಎಂದು ಕಟುವಾಗಿ ಟೀಕಿಸಿದೆ. ಇದರಿಂದ ಅಮೆರಿಕದ ನಾವೀನ್ಯ ಮತ್ತು ಸ್ಪರ್ಧಾತ್ಮಕತೆಗೆ ಅಡ್ಡಿಯಾಗಬಹುದು ಎಂದು ಹೇಳಿದೆ.

ಕೊಲಂಬಿಯಾದ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು,  ಈ ನಿರ್ಣಯವು ದೇಶದ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಅದು ದೂರಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.