ADVERTISEMENT

ಹಸ್ತಾಂತರ: ಪ್ರತಿಕ್ರಿಯಿಸಲು ರಾಣಾಗೆ ಅನುಮತಿ

ಪಿಟಿಐ
Published 1 ಏಪ್ರಿಲ್ 2021, 9:02 IST
Last Updated 1 ಏಪ್ರಿಲ್ 2021, 9:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಮುಂಬೈ ಭಯೋತ್ಪಾದನಾ ದಾಳಿಯ (2008) ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಹಸ್ತಾಂತರಿಸುವಂತೆ ಭಾರತವು ಅಮೆರಿಕಕ್ಕೆ ಮನವಿ ಮಾಡಿದ್ದು,ಈ ಬಗ್ಗೆ ಪ್ರತಿಕ್ರಿಯಿಸಲು ಅವಕಾಶ ನೀಡಬೇಕು ಎಂದು ಕೋರಿ ತಹವ್ವೂರ್‌ ಸಲ್ಲಿಸಿದ್ದ ಅರ್ಜಿಗೆ ಅಮೆರಿಕದ ನ್ಯಾಯಾಲಯವು ಸಮ್ಮತಿ ನೀಡಿದೆ.

ರಾಣಾ ಹಸ್ತಾಂತರ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 12ಕ್ಕೆ ನಿಗದಿ ಮಾಡಲಾಗಿದೆ. ರಾಣಾ ಹಸ್ತಾಂತರಕ್ಕೆ ಅಮೆರಿಕ ಸರ್ಕಾರ ಕೂಡ ಬೆಂಬಲ ವ್ಯಕ್ತಪಡಿಸಿದೆ.

‘ರಾಣಾ ತನ್ನ ಹಸ್ತಾಂತರ ಕುರಿತಂತೆ ಏಪ್ರಿಲ್‌ 5ರೊಳಗೆ 20 ಪುಟಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬಹುದು’ ಎಂದು ಲಾಸ್ ಏಂಜಲೀಸ್‌ನ ಡಿಸ್ಟ್ರಿಕ್ಟ್‌ ಕೋರ್ಟ್‌ ನ್ಯಾಯಧೀಶರಾದ ಜಾಕ್ವೆಲಿನ್ ಚೂಲ್ಜಿಯಾನ್ ಅವರು ಬುಧವಾರ ತಿಳಿಸಿದರು.

ADVERTISEMENT

‘ಸರ್ಕಾರ ಕೂಡ ಏಪ್ರಿಲ್‌ 12ರೊಳಗೆ 20 ಪುಟಗಳಲ್ಲಿ ಮರುಪ್ರತಿಕ್ರಿಯೆ ಸಲ್ಲಿಸಬಹುದು’ ಎಂದು ಅವರು ಹೇಳಿದರು.

‘ರಾಣಾ ಹಸ್ತಾಂತರಕ್ಕೆ ಅಮೆರಿಕ ಸರ್ಕಾರ ಬೆಂಬಲ ಸೂಚಿಸುತ್ತಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಪ್ರತಿಕ್ರಿಯಿಸಲು ಅವಕಾಶ ನೀಡಬೇಕು’ ಎಂದು ಕೋರಿ ಕಳೆದ ವಾರ ತಹವ್ವೂರ್ ರಾಣಾ ಅರ್ಜಿ ಸಲ್ಲಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.