ADVERTISEMENT

ತಾನೇ ಮುಂದಿನ ಅಧ್ಯಕ್ಷ ಎಂದು ಬೈಡನ್‌ ಸುಳ್ಳು ಘೋಷಣೆ: ಟ್ರಂಪ್ ಆರೋಪ

ಏಜೆನ್ಸೀಸ್
Published 8 ನವೆಂಬರ್ 2020, 2:41 IST
Last Updated 8 ನವೆಂಬರ್ 2020, 2:41 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್: ‘ಬೈಡನ್‌ ಅವರು ತಾನೇ ಮುಂದಿನ ಅಧ್ಯಕ್ಷ ಎಂದು ಸುಳ್ಳು ಘೋಷಣೆ ಮಾಡುತ್ತಿದ್ದಾರೆ’ ಎಂದು ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ.

‘ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ’ ಎಂದು ಅಮೆರಿಕದ ಪ್ರಮುಖ ಸುದ್ದಿ ವಾಹಿನಿ ಗಳು ಶನಿವಾರ ವರದಿ ಮಾಡಿದ ಬಳಿಕ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮ ವರದಿಗಳು ಮತ್ತು ಬೈಡನ್‌ ಅವರ ಹೇಳಿಕೆಗೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಟ್ರಂಪ್‌, ‘ಬೈಡನ್‌ ಅವರು ತಾನೇ ಮುಂದಿನ ಅಧ್ಯಕ್ಷ ಎಂದು ಸುಳ್ಳು ಘೋಷಣೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಬೈಡನ್‌ ಅವರು ಹಾಗೇಕೆ ಹೇಳುತ್ತಿದ್ದಾರೆ ಮತ್ತು ಅವರ ಮಾಧ್ಯಮ ಮಿತ್ರರು ಅವರಿಗೇಕೆ ಬೆಂಬಲ ನೀಡು ತ್ತಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಸತ್ಯ ಬಹಿರಂಗವಾಗುವುದನ್ನು ಅವರು ಬಯಸುವುದಿಲ್ಲ. ಫಲಿತಾಂಶ ಘೋಷಣೆ ಇನ್ನೂ ತುಂಬಾ ದೂರವಿದೆ’ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.