ADVERTISEMENT

ಅಮೆರಿಕದಲ್ಲಿ ಕಾಳ್ಗಿಚ್ಚು: ನಂದಿಸಲು ಹರಸಾಹಸ

ಏಜೆನ್ಸೀಸ್
Published 1 ಮೇ 2022, 12:32 IST
Last Updated 1 ಮೇ 2022, 12:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಾಂಟಾ ಫೆ (ಅಮೆರಿಕ): ಅಮೆರಿಕದ ನ್ಯೂ ಮೆಕ್ಸಿಕೊ ರಾಜ್ಯದ ಉತ್ತರ ಭಾಗದ ಸಣ್ಣ ನಗರ ಮತ್ತು ಗಡಿ ಪ್ರದೇಶಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಒಂದು ಸಾವಿರಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜತೆಗೆ ಬುಲ್ಡೋಜರ್‌ಗಳು ಮತ್ತು ವಿಮಾನಗಳ ನೆರವನ್ನೂ ಪಡೆಯಲಾಗಿದೆ.

ಲಾಸ್ ವೆಗಾಸ್‌ನಲ್ಲಿ ಸಹ ಕಾಳ್ಗಿಚ್ಚಿನ ತೀವ್ರತೆ ಕಾಣಿಸಿಕೊಂಡಿದ್ದು, ಬೆಂಕಿಯಿಂದ 11 ಕಿ.ಮೀ.ವರೆಗೆ ಬೂದಿಯ ರಾಶಿ ಬಿದ್ದಿರುವುದು ಕಂಡುಬಂದಿದೆ. ಈ ಭಾಗದಲ್ಲಿ 13 ಸಾವಿರ ಜನರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆಎಂದು ಅಗ್ನಿಶಾಮಕ ನಿರ್ವಹಣಾ ತಂಡದ ವಕ್ತಾರ ಮೈಕ್‌ ಜಾನ್ಸನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.