ADVERTISEMENT

ವಿದೇಶಿ ವಿದ್ಯಾರ್ಥಿಗಳ ನೋಂದಣಿ ಸೌಲಭ್ಯ ರದ್ದು: ಹಾರ್ವರ್ಡ್‌ ವಿ.ವಿಗೆ ಎಚ್ಚರಿಕೆ

ವಿಶ್ವವಿದ್ಯಾಲಯಕ್ಕೆ 2.7 ಮಿಲಿಯನ್ ಡಾಲರ್‌ಗೂ (ಅಂದಾಜು ₹23 ಕೋಟಿ) ಅಧಿಕ ಅನುದಾನ ನೀಡುವುದನ್ನು ಸರ್ಕಾರ ರದ್ದು ಮಾಡಿದೆ.

ಪಿಟಿಐ
Published 17 ಏಪ್ರಿಲ್ 2025, 12:59 IST
Last Updated 17 ಏಪ್ರಿಲ್ 2025, 12:59 IST
–
   

ನ್ಯೂಯಾರ್ಕ್‌/ವಾಷಿಂಗ್ಟನ್: ಅಂತರರಾಷ್ಟ್ರೀಯ ವಿದ್ಯಾರ್ಥಿ ವೀಸಾ ಹೊಂದಿರುವವರು ನಡೆಸುತ್ತಿರುವ ‘ಕಾನೂನುಬಾಹಿರ ಮತ್ತು ಹಿಂಸಾತ್ಮಕ’ ಚಟುವಟಿಕೆಗಳ ಕುರಿತ ಮಾಹಿತಿಯನ್ನು ಏಪ್ರಿಲ್ 30ರ ಒಳಗಾಗಿ ಸಲ್ಲಿಸುವಂತೆ ಅಮೆರಿಕ ಗೃಹ ಇಲಾಖೆಯು ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ.

ಒಂದು ವೇಳೆ, ಈ ಗಡುವಿನ ಒಳಗಾಗಿ ಮಾಹಿತಿ ಸಲ್ಲಿಸದಿದ್ದಲ್ಲಿ, ವಿದೇಶಿ ವಿದ್ಯಾರ್ಥಿಗಳ  ನೋಂದಣಿಗೆ  ಸಂಬಂಧಿಸಿ ವಿ.ವಿ ಹೊಂದಿರುವ ಸೌಲಭ್ಯವನ್ನು ಹಿಂಪಡೆಯಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಇದರೊಂದಿಗೆ ಹಾರ್ವರ್ಡ್‌ ವಿ.ವಿ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ನಡುವಿನ ಜಟಾಪಟಿ ತೀವ್ರಗೊಂಡಂತಾಗಿದೆ.

ಜೊತೆಗೆ, ವಿಶ್ವವಿದ್ಯಾಲಯಕ್ಕೆ 2.7 ಮಿಲಿಯನ್ ಡಾಲರ್‌ಗೂ (ಅಂದಾಜು ₹23 ಕೋಟಿ) ಅಧಿಕ ಅನುದಾನ ನೀಡುವುದನ್ನು ಸರ್ಕಾರ ರದ್ದು ಮಾಡಿದೆ.

ADVERTISEMENT

ಸರ್ಕಾರ ನೀಡಿದ್ದ ಕೆಲ ಸೂಚನೆಗಳನ್ನು ಹಾಗೂ ನೀತಿಗಳಲ್ಲಿ ಮಾಡಿದ್ದ ಬದಲಾವಣೆಗಳನ್ನು ವಿಶ್ವವಿದ್ಯಾಲಯ ಇತ್ತೀಚೆಗೆ ತಿರಸ್ಕರಿಸಿತ್ತು. ಈ ಕಾರಣಕ್ಕೆ ಟ್ರಂಪ್‌ ಆಡಳಿತ ಈ ಕ್ರಮಗಳನ್ನು ಕೈಗೊಂಡಿದೆ. 

ಹಾರ್ವರ್ಡ್‌ ವಿಶ್ವವಿದ್ಯಾಲಯ ಎಡಪಂಥೀಯ ಸಿದ್ಧಾಂತ ಬೆಂಬಲಿಸುತ್ತದೆ ಎಂಬ ಕಾರಣಕ್ಕೆ ವಿ.ವಿಗೆ ನೀಡಿರುವ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕೂಡ ಹಿಂಪಡೆಯುವುದಾಗಿ ಸರ್ಕಾರ ಎಚ್ಚರಿಸಿತ್ತು.

ಅಮೆರಿಕ ವಿರೋಧಿ ಹಾಗೂ ಹಮಾಸ್‌ ಪರ ಸಿದ್ಧಾಂತದಿಂದ ತನ್ನ ಕ್ಯಾಂಪಸ್‌ ಮತ್ತು ತರಗತಿ ಕೊಠಡಿಗಳನ್ನು ವಿಷಮಯಗೊಳಿಸಿರುವ ಹಾರ್ವರ್ಡ್‌ ವಿ.ವಿ.ಯ ವೈಭವ ಈಗ ನೆನಪು ಮಾತ್ರ
ಕ್ರಿಸ್ಟಿ ನೋಮ್ ಗೃಹ ಇಲಾಖೆ ಕಾರ್ಯದರ್ಶಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.