ADVERTISEMENT

ಚೀನಾದ ಕಾರ್ಮಿಕ ಶಿಬಿರಗಳಿಂದ ಉತ್ಪನ್ನಗಳ ಆಮದಿಗೆ ತಡೆ

ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ಮಸೂದೆಗೆ ಅಂಗೀಕಾರ

ಪಿಟಿಐ
Published 24 ಸೆಪ್ಟೆಂಬರ್ 2020, 6:49 IST
Last Updated 24 ಸೆಪ್ಟೆಂಬರ್ 2020, 6:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಚೀನಾದ ಕ್ಸಿನ್‌ಜಿಯಾಂಗ್‌ನ ಕಾರ್ಮಿಕರ ಶಿಬಿರಗಳಲ್ಲಿನ ಉಯಿಘರ್ ಮುಸ್ಲಿಮರಿಂದ ಬಲವಂತವಾಗಿ ತಯಾರಿಸಿದ ಉತ್ಪನ್ನಗಳ ಆಮದನ್ನು ತಡೆಯುವ ನಿಟ್ಟಿನಲ್ಲಿ ಅಮೆರಿಕ ಶಾಸನವೊಂದನ್ನು ತರಲು ಮುಂದಾಗಿದೆ. ಈ ನಿಟ್ಟಿನಲ್ಲಿ ಅದು ರೂಪಿಸಿರುವ ‘ಉಯಿಘರ್‌ ಫೋರ್ಸ್ಡ್‌ ಲೇಬರ್‌ ಪ್ರಿವೆನ್ಷನ್‌ ಆ್ಯಕ್ಟ್‌’ಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅನುಮೋದನೆ ನೀಡಿದೆ.

ಜನಪ್ರತಿನಿಧಿಗಳ ಸಭೆಯು ಮಂಗಳವಾರ ಈ ಮಸೂದೆಯನ್ನು 406–3 ಮತಗಳಿಂದ ಅಂಗೀಕರಿಸಿತು. ಈ ಮಸೂದೆಯು ಸೆನೆಟ್‌ನಲ್ಲಿ ಮಂಡನೆಯಾಗಬೇಕಿದ್ದು, ಅಲ್ಲಿ ಅನುಮೋದನೆ ದೊರೆತರೆ ಅಧ್ಯಕ್ಷರ ಸಹಿಗೆ ಹೋಗುತ್ತದೆ.

ಉಯಿಘರ್‌ನ ಕಾರ್ಮಿಕ ಶಿಬಿರಗಳಲ್ಲಿ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ತಡೆಯುವ ಪ್ರಯತ್ನವಾಗಿದೆ. ಈ ಕಾಯ್ದೆಯು ಜಾರಿಯಾದರೆ ಉಯಿಘರ್‌ನಲ್ಲಿ ಮಾನವ ಹಕ್ಕುಗಳ ಮಾನದಂಡಗಳನ್ನು ಜಾರಿಗೊಳಿಸಲು ಮುಂದಾದ ವಿಶ್ವದ ಮೊದಲ ಶಾಸನವಾಗಲಿದೆ ಎಂದು ಅಮೆರಿಕದ ಸಂಸದರು ಹೇಳಿದ್ದಾರೆ.

ADVERTISEMENT

ಕ್ಸಿನ್‌ಜಿಯಾಂಗ್‌ನಲ್ಲಿರುವ ಶಿಬಿರಗಳಲ್ಲಿ ಲಕ್ಷಾಂತರ ಜನರಿಂದ ಬಲವಂತ ಮತ್ತು ಅಮಾನವೀಯವಾಗಿ ವಸ್ತುಗಳನ್ನು ತಯಾರಿಸಲಾಗುತ್ತಿದೆ.ಅವರಿಂದ ತಯಾರಿಸಿದ ವಸ್ತುಗಳ ಆಮದನ್ನು ನಿಲ್ಲಿಸುವ ಮೂಲಕ, ಚೀನಾಕ್ಕೆ ಎಚ್ಚರಿಕೆಯನ್ನು ರವಾನಿಸುವ ಜತೆಗೆ, ಈ ಕೃತ್ಯವನ್ನು ಅಂತ್ಯಗೊಳಿಸಬೇಕು ಎಂದು ಸಭೆಯಲ್ಲಿ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.