ನ್ಯೂಯಾರ್ಕ್/ವಾಷಿಂಗ್ಟನ್: ಡ್ರಗ್ಸ್‌ಗಳ ಕಳ್ಳಸಾಗಣೆಗೆ ಸಂಬಂಧಿಸಿ ಅಮೆರಿಕ ಗುಪ್ತಚರ ಸಂಸ್ಥೆ ವರದಿ ಸಿದ್ಧಪಡಿಸಿದ್ದು, ಈ ಕೃತ್ಯಗಳಲ್ಲಿ ತೊಡಗಿರುವ ದೇಶಗಳ ಪೈಕಿ ಭಾರತ ಮತ್ತು ಚೀನಾ ಪ್ರಮುಖವಾಗಿವೆ ಎಂದು ಉಲ್ಲೇಖಿಸಲಾಗಿದೆ.
ಅಲ್ಲದೇ, ಮಾದಕದ್ರವ್ಯ ‘ಫೆಂಟಾನಿಲ್’ ತಯಾರಿಕೆಗೆ ಅಗತ್ಯವಿರುವ ರಾಸಾಯನಿಕಗಳು ಹಾಗೂ ಫೆಂಟಾಲಿನ್ ಮಾತ್ರೆಗಳ ತಯಾರಿಕೆಗೆ ಬಳಸುವ ಉಪಕರಣ ಪೂರೈಸುವ ಪ್ರಮುಖ ದೇಶ ಕೂಡ ಭಾರತ ಎಂದು ವರದಿಯಲ್ಲಿ ಹೇಳಲಾಗಿದೆ.
ಅಮೆರಿಕಕ್ಕೆ ಫೆಂಟಾನಿಲ್ ಸೇರಿದಂತೆ ಹಲವು ಮಾದಕದ್ರವ್ಯಗಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ. 2024ರ ಅಕ್ಟೋಬರ್‌ಗೆ ಅಂತ್ಯಗೊಂಡ ಹಿಂದಿನ 12 ತಿಂಗಳಲ್ಲಿ ಈ ಮಾದಕದ್ರವ್ಯ ಸೇವಿಸಿ ಅಮೆರಿಕದಲ್ಲಿ 52 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.