ADVERTISEMENT

ಮುಂದಿನ ವಾರ ಇರಾನ್ ಜೊತೆ ಮಾತುಕತೆ: ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:40 IST
Last Updated 25 ಜೂನ್ 2025, 16:40 IST
ಡೊನಾಲ್ಡ್ ಟ್ರಂಪ್ 
ಡೊನಾಲ್ಡ್ ಟ್ರಂಪ್    

ವಾಷಿಂಗ್ಟನ್: ಮುಂದಿನ ವಾರ ಇರಾನ್ ಜೊತೆ ಮಾತುಕತೆ ನಡೆಸಲು ನಮ್ಮ ಆಡಳಿತ ಯೋಜಿಸಿದೆ ಎಂದು ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ ಒಂದು ದಿನದ ನಂತರ ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದಿದೆ.

ಅಣ್ವಸ್ತ್ರ ತಯಾರಿಕೆ ಕೈಬಿಟ್ಟು ಒಪ್ಪಂದಕ್ಕೆ ಬರುವಂತೆ ಅಮೆರಿಕ ನೀಡಿದ್ದ ಆಹ್ವಾನ ತಿರಸ್ಕರಿಸಿ ಅಣ್ವಸ್ತ್ರ ಮುಂದುವರಿಸಿದ್ದ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಪ್ರಮುಖ ಮೂರು ಪರಮಾಣು ತಾಣಗಳನ್ನು ಅತ್ಯಾಧುನಿಕ ಬಂಕರ್ ಬಸ್ಟರ್ ಕ್ಷಿಪಣಿಗಳನ್ನು ಬಳಸಿ ಧ್ವಂಸಗೊಳಿಸಿತ್ತು. ಬಳಿಕ, ಇರಾನ್ ಸಹ ಅಮೆರಿಕದ ಕತಾರ್ ವಾಯುನೆಲೆಗಳ ಮೇಲೆ ದಾಳಿ ಮಾಡಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ಮತ್ತು ಇರಾನ್ ನಡುವಿನ 14 ದಿನಗಳ ಸಂಘರ್ಷ ಅಂತ್ಯಗೊಂಡಿದ್ದು, ಕದನ ವಿರಾಮಕ್ಕೆ ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಘೊಷಿಸಿದ್ದರು.

ADVERTISEMENT

ಈ ನಡುವೆ ವರದಿಗಾರರೊಂದಿಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷರು, ನಾನು ೆರಡೂ ದೆಶಗಳ ನಾಯಕರ ಜೊತೆ ಮಾತನಾಡಿದ್ದೇನೆ. ಅವರಿಬ್ಬರೂ ಬಹಳ ದಣಿದಿದ್ದಾರೆ. ಮತ್ತೆ ಯುದ್ಧ ನಡೆಯುವುದಿಲ್ಲ ಎಂದು ನಂಬಿದ್ದೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.