ADVERTISEMENT

Iran-Israel war | ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ: ದಿನದ ಬೆಳವಣಿಗೆ..

ಏಜೆನ್ಸೀಸ್
Published 28 ಫೆಬ್ರುವರಿ 2026, 19:34 IST
Last Updated 28 ಫೆಬ್ರುವರಿ 2026, 19:34 IST
   

ದುಬೈ/ವಾಷಿಂಗ್ಟನ್‌/ಕೈರೊ: ಇರಾನ್‌ ಮೇಲೆ ಅಮೆರಿಕ ಹಾಗೂ ಇಸ್ರೇಲ್‌ ಶನಿವಾರ ರಾತ್ರಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿವೆ. ಇರಾನ್‌ ಕೂಡ ಪ್ರತಿದಾಳಿ ನಡೆಸಿದ್ದು, ಇದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ಮನೆ ಮಾಡಿದೆ.

ದಿನದ ಬೆಳವಣಿಗೆ

  • ಟೆಹರಾನ್‌ ಸ್ಥಳೀಯ ಕಾಲಮಾನ 9.30ರ ವೇಳೆಗೆ ಇರಾನ್‌ನ 30ಕ್ಕೂ ಹೆಚ್ಚು ನಗರಗಳ ಮೇಲೆ ಬಾಂಬ್‌ ದಾಳಿ

  • ಇಸ್ಫಾನ್‌, ಖೊಮ್‌, ಕರಾಜ್‌ ಹಾಗೂ ಕೆರ್ಮಾನ್‌ಶಾದಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ

    ADVERTISEMENT
  • ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ– ದಿಕ್ಕಾಪಾಲಾಗಿ ಓಡಿದ ಜನರು

  • ದಾಳಿ ನಡೆಸಿರುವುದನ್ನು ಖಚಿತ ಪಡಿಸಿದ ಅಮೆರಿಕ, ಇಸ್ರೇಲ್‌

  • ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ಪ್ರತಿದಾಳಿ

  • ಡ್ರೋನ್‌, ಕ್ಷಿಪಣಿ ದಾಳಿ ಬೆನ್ನಲ್ಲೇ ವಾಯುಪ್ರದೇಶ ಮುಚ್ಚಿದ ಯುಎಇ

  • ಭಾರತ ಸೇರಿ ಹಲವು ದೇಶಗಳ ವಿಮಾನಗಳ ಸಂಚಾರ ರದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.