ADVERTISEMENT

ನ್ಯಾಟೋಗೆ ಭಾರತ ಸೇರ್ಪಡೆ ಸಂಸತ್ತಿನಲ್ಲಿ ಮಸೂದೆ ಮಂಡನೆ

ಪಿಟಿಐ
Published 17 ಜೂನ್ 2019, 20:00 IST
Last Updated 17 ಜೂನ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಭಾರತವನ್ನು ನ್ಯಾಟೋ ಒಕ್ಕೂಟಕ್ಕೆ ಸೇರಿಸಬೇಕೆಂದು ಅಮೆರಿಕ ಸಂಸತ್ತಿನಲ್ಲಿ ಇಬ್ಬರುಹಿರಿಯ ಸಂಸದರು ಮಸೂದೆಯನ್ನು ಮಂಡಿಸಿದ್ದಾರೆ.

ಈ ಸಂಬಂಧ, ದೇಶದಶಸ್ತ್ರಾಸ್ತ್ರ ನಿಯಂತ್ರಣ ರಫ್ತು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ಮಾರ್ಕ್‌ ವಾರ್ನರ್‌ ಹಾಗೂ ರಿಪಬ್ಲಿಕನ್‌ ಪಕ್ಷದ ಜಾನ್‌ ಕಾರ್ನಿನ್‌ ಸೆನೆಟ್‌ನಲ್ಲಿ ತಿದ್ದುಪಡಿ ವಿಷಯ ಪ್ರಸ್ತಾಪಿಸಿದರು. ಭಾರತವು ಅಮೆರಿಕದ ಮುಖ್ಯ ರಕ್ಷಣಾ ಪಾಲುದಾರ ಆಗಿ ಹೊರಹೊಮ್ಮಿದೆ. ಈ ತಿದ್ದುಪಡಿಯು ಉಭಯ ದೇಶಗಳ ಸಂಬಂಧವನ್ನು ಇನ್ನುಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಒಸಾಕದಲ್ಲಿ ಮುಂದಿನ ವಾರ ನಡೆಯಲಿರುವ ಜಿ20 ಶೃಂಗಸಭೆಯಲ್ಲಿಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧ್ರಾನಿ ಮೋದಿ ಅವರೊಂದಿಗೆ ಸಭೆ ನಡೆಸುವುದಾಗಿ ಹೇಳಿದ ಮೇಲೆ ಈ ತಿದ್ದುಪಡಿಯ ಚರ್ಚೆ ಮುನ್ನೆಲೆಗೆ ಬಂದಿದೆ.

‘ಇದೊಂದು ಮಹತ್ವದ ಬೆಳವಣಿಗೆ’ ಎಂದು ಭಾರತ–ಅಮೆರಿಕ ಕಾರ್ಯತಂತ್ರ ಮತ್ತು ಸಹಭಾಗಿತ್ವ ವೇದಿಕೆಯ ಅಧ್ಯಕ್ಷ ಮುಖೇಶ್‌ ಅಘಿ ಅಭಿಪ್ರಾಯ‍ಪಟ್ಟಿದ್ದಾರೆ.

‘ರಕ್ಷಣಾ ಒಪ್ಪಂದವನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ರಾಜಕೀಯ ಬೆಂಬಲದ ಸೂಚನೆ’ ಎಂದು ಭಾರತ ಅಮೆರಿಕ ವ್ಯವಹಾರ ಕೌನ್ಸಿಲ್‌ನಬೆಂಜಮಿನ್‌ ಶೆವಾರ್ಟ್ಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.