ADVERTISEMENT

ಭಯೋತ್ಪಾದನೆ ಸಂಘಟನೆಗಳ ನಿಗ್ರಹ: ಅಮೆರಿಕ, ಪಾಕಿಸ್ತಾನ ಮಾತುಕತೆ

ಪಿಟಿಐ
Published 13 ಆಗಸ್ಟ್ 2025, 13:59 IST
Last Updated 13 ಆಗಸ್ಟ್ 2025, 13:59 IST
.
.   

ಇಸ್ಲಾಮಾಬಾದ್ ಬಲೂಚಿಸ್ತಾನ್‌ ಲಿಬರೇಷನ್‌ ಆರ್ಮಿ (ಬಿಎಲ್‌ಎ), ಐಎಸ್‌– ಖೋರಾಸಾನ್‌, ತಾಲಿಬಾನ್‌ ಸೇರಿದಂತೆ ಪ್ರಮುಖ ಭಯೋತ್ಪಾದನಾ ಸಂಘಟನೆಗಳನ್ನು ಸಮರ್ಪಕವಾಗಿ ನಿಗ್ರಹಿಸಲು ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ವೃದ್ಧಿಸಲು ಪಾಕಿಸ್ತಾನ ಮತ್ತು ಅಮೆರಿಕ ಸಮ್ಮತಿ ನೀಡಿವೆ.

ಪಾಕಿಸ್ತಾನ ಮೂಲದ ಬಿಎಲ್‌ಎ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಭಯೋತ್ಪಾದನೆ ನಿಗ್ರಹ ಕುರಿತು ದ್ವಿಪಕ್ಷೀಯ ಮಾತುಕತೆಗಳು ನಡೆದಿವೆ.

ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ವಿಶೇಷ ಕಾರ್ಯದರ್ಶಿ ನಬೀಲ್‌ ಮುನೀರ್‌ ಅವರ ನೇತೃತ್ವದಲ್ಲಿ ನಡೆದ ಚರ್ಚೆಯಲ್ಲಿ ಅಮೆರಿಕದ ವಿದೇಶಾಂಗ ಸಚಿವಾಲಯದ ಭಯೋತ್ಪಾದನಾ ನಿಗ್ರಹದ ಕಾರ್ಯಕಾರಿ ಸಂಯೋಜಕರಾದ ಗೊರಿ ಡಿ. ಲೋಗೆರ್ಪೊ ಭಾಗವಹಿಸಿದ್ದರು.

ADVERTISEMENT

ಎರಡೂ ದೇಶಗಳ ನಡುವೆ ದೀರ್ಘಕಾಲದಿಂದ ಸ್ನೇಹ ಮತ್ತು ಪಾಲುದಾರಿಕೆಯಿದ್ದು, ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಬದ್ಧತೆಯನ್ನು ತೋರಿದ್ದೇವೆ. ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗೂ ಇದು ಸಹಕಾರವಾಗಲಿದೆ ಎಂದು ಜಂಟಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.