ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಗಾವಲು ಪಡೆಯ ವಾಹನಗಳಿಗಾಗಿ ನ್ಯೂಯಾರ್ಕ್ ನಗರದಲ್ಲಿ ಹೇರಲಾಗಿದ್ದ ಕಟ್ಟುನಿಟ್ಟಾದ ಸಂಚಾರ ನಿರ್ಬಂಧಗಳ ಕಾರಣದಿಂದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರನ್ನು ಪೊಲೀಸರು ತಡೆದರು.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿರುವ ವಿಡಿಯೊವೊಂದರಲ್ಲಿ, ಮ್ಯಾಕ್ರನ್ ಮತ್ತು ಅವರ ನಿಯೋಗ ಪಾದಚಾರಿ ರಸ್ತೆಯಲ್ಲಿ ನಿಂತಿರುವುದು ದಾಖಲಾಗಿದೆ. ಈ ವೇಳೆ ನ್ಯೂಯಾರ್ಕ್ ಪೊಲೀಸ್ ಅಧಿಕಾರಿಯೊಬ್ಬರು ಅವರಲ್ಲಿ ಕ್ಷಮೆಯಾಚಿಸುತ್ತಾ, ಬೆಂಗಾವಲು ಪಡೆಗಾಗಿ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ರಸ್ತೆ ದಾಟಲು ಸಾಧ್ಯವಿಲ್ಲ ಎಂದು ಎಂದು ಹೇಳಿದ್ದಾರೆ.
ಇದರ ನಂತರ ಫೋನ್‌ನಲ್ಲಿ ಮಾತನಾಡುವ ಮ್ಯಾಕ್ರನ್, ‘ಹೇಗಿದ್ದೀರಿ? ವಿಚಾರ ಏನು ಗೊತ್ತೆ? ನಿಮ್ಮ ಆಗಮನಕ್ಕಾಗಿ ಇಲ್ಲಿ ಎಲ್ಲವನ್ನೂ ನಿರ್ಬಂಧಿಸಲಾಗಿದ್ದು, ನಾನು ರಸ್ತೆಯಲ್ಲಿ ಕಾಯುತ್ತಿದ್ದೇನೆ’ ಎಂದು ಟ್ರಂಪ್ ಜೊತೆಗೆ ಮಾತನಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.