ಮಾಸ್ಕೊ/ಬೈಕ್‌ನೂರ್ (ರಾಯಿಟರ್ಸ್/ಎಪಿ): ನಾಸಾದ ಜಾನಿ ಕಿಮ್ ಮತ್ತು ರಷ್ಯಾದ ಇಬ್ಬರು ಗಗನಯಾತ್ರಿಗಳು ರಷ್ಯಾದ ಬಾಹ್ಯಾಕಾಶ ನೌಕೆ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಶಸ್ವಿಯಾಗಿ ತಲುಪಿದ್ದಾರೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೊಸ್‌ಕೋಸ್ಮೋಸ್ ಮಂಗಳವಾರ ಹೇಳಿದೆ.
ಉಡಾವಣೆಯಾದ ಮೂರು ಗಂಟೆಗಳಲ್ಲಿ ಬಾಹ್ಯಾಕಾಶ ಕೇಂದ್ರವನ್ನು ತಲುಪಿರುವ ಕಿಮ್ ಮತ್ತು ರಷ್ಯಾದ ಸೆರ್ಗೇಯ್ ರಿಝಿಕೋವ್ ಮತ್ತು ಅಲೆಕ್ಸಿ ಝುಬ್ರಿತಟ್ಸ್‌ಕಿ ಅವರು 8 ತಿಂಗಳು ಅಲ್ಲೇ ವಾಸ ಮಾಡಲಿದ್ದಾರೆ.
ಮೂವರನ್ನು ಹೊತ್ತಿದ್ದ ‘ಸೋಯುಜ್ ಎಮ್‌ಎಸ್–27’ ನೌಕೆ ಇರುವ ‘ಸೋಯುಜ್’ ರಾಕೆಟ್ ಅನ್ನು ಕಜಕಿಸ್ತಾನದಲ್ಲಿ ರಷ್ಯಾ ಗುತ್ತಿಗೆ ಪಡೆದಿರುವ ಬೈಕ್‌ನೂರ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
‘ಮುಂದಿನ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಸುಗಮಗೊಳಿಸುವ ಮತ್ತು ಭೂಮಿಯಲ್ಲಿನ ಜನರ ಉಪಯೋಗದ ಉದ್ದೇಶದಿಂದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಯೋಗಗಳನ್ನು ಕಿಮ್ ನಡೆಸಲಿದ್ದಾರೆ’ ಎಂದು ನಾಸಾ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.