ADVERTISEMENT

ಸಂಭಾವ್ಯ ದೂರಸಂಪರ್ಕ ದಾಳಿ ತಡೆದ ಅಮೆರಿಕ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೂ ಮುನ್ನ ನಡೆದ ಮಹತ್ವದ ಕಾರ್ಯಾಚರಣೆ

ಪಿಟಿಐ
Published 23 ಸೆಪ್ಟೆಂಬರ್ 2025, 14:12 IST
Last Updated 23 ಸೆಪ್ಟೆಂಬರ್ 2025, 14:12 IST
<div class="paragraphs"><p>ಅಮೆರಿಕ ಧ್ವಜ</p></div>

ಅಮೆರಿಕ ಧ್ವಜ

   

ನ್ಯೂಯಾರ್ಕ್‌: ನ್ಯೂಯಾರ್ಕ್‌ನ ದೂರಸಂಪರ್ಕ ಜಾಲವನ್ನು ಸ್ಥಗಿತಗೊಳಿಸಬಹುದಾದ ಒಂದು ಲಕ್ಷಕ್ಕೂ ಹೆಚ್ಚು ಸಿಮ್‌ಕಾರ್ಡ್‌ಗಳ ಜಾಲವನ್ನು ಕಿತ್ತುಹಾಕಿರುವುದಾಗಿ ಅಮೆರಿಕ ಸೀಕ್ರೇಟ್‌ ಸರ್ವೀಸ್‌ ಮಂಗಳವಾರ ತಿಳಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೂ ಮುನ್ನ ಈ ಕಾರ್ಯ ಮಾಡಿರುವುದಾಗಿ ಅದು ಹೇಳಿದೆ. ದೇಶ ಮತ್ತು ಸರ್ಕಾರಕ್ಕೆ ಇದರಿಂದ ಬೆದರಿಕೆ ಎದುರಾಗುವ ಸಾಧ್ಯತೆಯಿತ್ತು. ಹೀಗಾಗಿ ತ್ವರಿತವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ಅದು ಹೇಳಿದೆ. 

ADVERTISEMENT

ಅನಾಮಧೇಯ ಕರೆಗಳ ಮೂಲಕ ಬರಬಹುದಾದ ಬೆದರಿಕೆಗಳು ಮತ್ತು ದೂರಸಂಪರ್ಕ ದಾಳಿ ಸಾಧ್ಯತೆಗಳನ್ನು ಈ ಮೂಲಕ ತಡೆಯಲಾಗಿದೆ ಎಂದು ಅದು ವಿವರಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯುವ ಸ್ಥಳದಿಂದ 56 ಕಿ.ಮೀ. ದೂರದಲ್ಲಿ ಈ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದು ಮಾಹಿತಿ ನೀಡಿದೆ. ವಶಪಡಿಸಿಕೊಂಡಿರುವ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿ, ಸಮಗ್ರ ತನಿಖೆ ನಡೆಸಲಾಗುವುದು ಎಂದು ಅದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.