ADVERTISEMENT

ಆನ್‌ಲೈನ್‌ ಶಿಕ್ಷಣ ನೀಡುತ್ತಿರುವುದರಿಂದ ಸ್ವದೇಶಕ್ಕೆ ತೆರಳಿ: ಅಮೆರಿಕ

ಪಿಟಿಐ
Published 7 ಜುಲೈ 2020, 15:55 IST
Last Updated 7 ಜುಲೈ 2020, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌ : ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಇಲ್ಲಿನ ವಿಶ್ವವಿದ್ಯಾಲಯಗಳು ಆನ್‌ಲೈನ್‌ ಶಿಕ್ಷಣ ನೀಡುತ್ತಿರುವುದರಿಂದ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಮರಳಬೇಕು. ಇಲ್ಲವೇ ಗಡಿಪಾರು ಮಾಡಲಾಗುವುದು ಎಂದುಅಮೆರಿಕ ವಲಸೆ ಪ್ರಾಧಿಕಾರ ಹೇಳಿದೆ. ಈ ನಡೆ ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ.

ವಲಸೆ ಮತ್ತು ಸುಂಕ ಜಾರಿ ಇಲಾಖೆ (ಐಸಿಇ) ಸೋಮವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, 2020ನೇ ಸಾಲಿನಲ್ಲಿ ಆನ್‌ಲೈನ್‌ ತರಗತಿಗಳಿಗಾಗಿ ನೋಂದಾಯಿಸಿದವರಿಗೆ ಅಮೆರಿಕ ವೀಸಾ ನೀಡಲಾಗುವುದಿಲ್ಲ. ತರಗತಿಗಳನ್ನು ತೆಗೆದುಕೊಳ್ಳದೇ ಇದ್ದಲ್ಲಿ, ಅಂತಹವರು ಮಾತ್ರವೇ ಅಮೆರಿಕದಲ್ಲಿ ಉಳಿಯಬಹುದು ಎಂದು ಹೇಳಿದೆ.

ಅಮೆರಿಕದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಶೈಕ್ಷಣಿಕ ಕಾರ್ಯಕ್ರಮಗಳಿಗೆ ತಮ್ಮ ಹೆಸರನ್ನು ನೋಂದಾಯಿಸಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಎಫ್‌–1 ವೀಸಾವನ್ನು ನೀಡಲಾಗುತ್ತದೆ. ತಾಂತ್ರಿಕ ಕಾರ್ಯಕ್ರಮ, ಭಾಷಾ ತರಬೇತಿ ಕಾರ್ಯಕ್ರಮಗಳಿಗೆ ಹೆಸರು ನೋಂದಾಯಿಸುವವರಿಗೆ ಎಂ–1 ವೀಸಾ ನೀಡಲಾಗುತ್ತಿದೆ.

ADVERTISEMENT

2018ರ ಎಸ್‌ಇವಿಪಿ ವರದಿಯಂತೆಭಾರತದ 2,51,290 ವಿದ್ಯಾರ್ಥಿಗಳು ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅತಿ ಹೆಚ್ಚು ವಿದ್ಯಾರ್ಥಿಗಳು ಚೀನಾದವರಾಗಿದ್ದಾರೆ (4,78,732).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.