ADVERTISEMENT

ಜಿ20 ಶೃಂಗಸಭೆ: ಮಾ. 1ರಂದು ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2023, 3:19 IST
Last Updated 24 ಫೆಬ್ರುವರಿ 2023, 3:19 IST
 ಎಸ್‌.ಜೈಶಂಕರ್ ಮತ್ತು ಆ್ಯಂಟನಿ ಬ್ಲಿಂಕೆನ್‌
ಎಸ್‌.ಜೈಶಂಕರ್ ಮತ್ತು ಆ್ಯಂಟನಿ ಬ್ಲಿಂಕೆನ್‌   

ವಾಷಿಂಗ್ಟನ್: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರು ಮಾರ್ಚ್ 1ರಂದು ಭಾರತಕ್ಕೆ ಆಗಮಿಸಲಿದ್ದಾರೆ.

ನವದೆಹಲಿಯಲ್ಲಿ ಮಾ. 1ರಂದು ನಡೆಯಲಿರುವ ಜಿ 20 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್, ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವ್ರೊವ್ ಅವರೊಂದಿಗೆ ಆ್ಯಂಟನಿ ಬ್ಲಿಂಕನ್ ಭಾಗವಹಿಸಲಿದ್ದಾರೆ.

‘ಬಹುಪಕ್ಷೀಯತೆಯ ಬಲಪಡಿಸುವಿಕೆ ಸೇರಿದಂತೆ ಆಹಾರ, ಇಂಧನ ಭದ್ರತೆ, ಸುಸ್ಥಿರ ಅಭಿವೃದ್ಧಿಯಲ್ಲಿ ಸಹಕಾರದ ಕುರಿತು ಬ್ಲಿಂಕೆನ್‌ ಚರ್ಚೆ ನಡೆಸಲಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನಮ್ಮ ಬಲವಾದ ಪಾಲುದಾರಿಕೆಯನ್ನು ಪುನರುಚ್ಚರಿಸಲು ಭಾರತದ‌ ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕರನ್ನು ಬ್ಲಿಂಕೆನ್‌ ಭೇಟಿ ಮಾಡಲಿದ್ದಾರೆ ಎಂದು ಹೇಳಿದೆ.

ADVERTISEMENT

ಭಾರತದ ಆತಿಥ್ಯದಲ್ಲಿ ಜಿ 20 ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.