
ವೆನೆಜುವೆಲಾ ಜತೆ ಸಂಬಂಧ ಹೊಂದಿರುವ ‘ವೆರೋನಿಕಾ’ ತೈಲ ಟ್ಯಾಂಕರ್ ಅನ್ನು ಅಮೆರಿಕ ಪಡೆಗಳು ವಶಕ್ಕೆ ಪಡೆದಿದೆ
ರಾಯಿಟರ್ಸ್
ವಾಷಿಂಗ್ಟನ್: ವೆನೆಜುವೆಲಾ ಜತೆಗೆ ಸಂಬಂಧ ಹೊಂದಿದೆ ಎಂದು ಹೇಳುವ ಮತ್ತೊಂದು ತೈಲ ಟ್ಯಾಂಕರ್ ಅನ್ನು ಅಮೆರಿಕ ವಶಪಡಿಸಿಕೊಂಡಿದೆ.
ದಕ್ಷಿಣ ಅಮೆರಿಕದ ಪ್ರಮುಖ ತೈಲ ಉತ್ಪಾದನಾ ದೇಶವಾದ ವೆನೆಜುವೆಲಾ ಮೇಲೆ ತನ್ನ ನಿಯಂತ್ರಣವನ್ನು ಬಿಗಿಗೊಳಿಸುವ ಭಾಗವಾಗಿ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ.
ಕೆರಿಬಿಯನ್ ಸಮದ್ರದಲ್ಲಿ ಅಮೆರಿಕ ಪಡೆಗಳು ‘ವೆರೋನಿಕಾ’ ಹೆಸರಿನ ಟ್ಯಾಂಕರ್ ಅನ್ನು ವಶಕ್ಕೆ ತೆಗೆದುಕೊಂಡಿವೆ ಎಂದು ಅಮೆರಿಕದ ‘ಹೋಮ್‌ಲ್ಯಾಂಡ್ ಸೆಕ್ಯುರಿಟಿ’ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ ಅಮೆರಿಕ ಪಡೆಗಳು ವಶಕ್ಕೆ ಪಡೆದ ಆರನೇ ತೈಲ ಟ್ಯಾಂಕರ್ ಇದಾಗಿದೆ. ಎರಡು ವಾರಗಳ ಹಿಂದೆಯಷ್ಟೇ ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ಅಮೆರಿಕ ಮಿಂಚಿನ ಕಾರ್ಯಾಚರಣೆ ಮೂಲಕ ವಶಕ್ಕೆಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.