ADVERTISEMENT

‌ಇರಾನ್‌ ತಿರಸ್ಕರಿಸಿದ ನಂತರವೂ ಪರಮಾಣು ಒಪ್ಪಂದ ಮಾತುಕತೆಗೆ ಅಮೆರಿಕ ಸಿದ್ಧ

ಏಜೆನ್ಸೀಸ್
Published 1 ಮಾರ್ಚ್ 2021, 6:03 IST
Last Updated 1 ಮಾರ್ಚ್ 2021, 6:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: 2015ರ ಪರಮಾಣು ಒಪ್ಪಂದ ಕುರಿತು ಅಮೆರಿಕದೊಂದಿಗೆ ಸಭೆಯಲ್ಲಿ ಭಾಗವಹಿಸಲು ಐರೋಪ್ಯ ಒಕ್ಕೂಟದ ಆಹ್ವಾನವನ್ನು ಇರಾನ್ ತಿರಸ್ಕರಿಸಿದ ನಂತರವೂ, ಈ ಒಪ್ಪಂದ ಕುರಿತು ಇರಾನ್‌ನೊಂದಿಗೆ ಮಾತುಕತೆ ನಡೆಸಲು ತಾವು ಸಿದ್ಧರಿದ್ದೇವೆ ಎಂದು ಅಮೆರಿಕ ಭಾನುವಾರ ತಿಳಿಸಿದೆ.

ಜೋ ಬೈಡನ್ ಆಡಳಿತದಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ‘ಐರೋಪ್ಯ ಒಕ್ಕೂಟದ ಆಹ್ವಾನವನ್ನು ತಿರಸ್ಕರಿಸಿರುವುದಕ್ಕೆ ಅಮೆರಿಕ ನಿರಾಶೆ ವ್ಯಕ್ತಪಡಿಸಿದೆ. ಆದರೆ, ರಾಜತಾಂತ್ರಿಕ ಪ್ರಕ್ರಿಯೆಯ ಭಾಗವಾಗಿ ಯೂರೋಪ್‌ನ ಆಹ್ವಾನವನ್ನು ತಿರಸ್ಕರಿಸಿರುವ ಸಮಯ ಮತ್ತು ಸ್ವರೂಪವನ್ನು ಅದು ಗಮನಿಸಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್‌, ಜರ್ಮನಿ, ರಷ್ಯಾ ಮತ್ತು ಐರೋಪ್ಯ ಒಕ್ಕೂಟಗಳೊಂದಿಗೆ ಅಮೆರಿಕ ಸಮಾಲೋಚನೆ ನಡೆಸುತ್ತಿದೆ‘ ಎಂದು ಹೇಳಿದ್ದಾರೆ.

‘ಈ ಒಪ್ಪಂದದ ಮಾತುಕತೆಯಲ್ಲಿ ಭಾಗವಹಿಸಲು ಕಾಲ ಪಕ್ವವಾಗಿಲ್ಲ. ಈ ಮಾತುಕತೆಯಲ್ಲಿ ಅಮೆರಿಕ ವೀಕ್ಷಕರಾಗಿ ಭಾಗವಹಿಸಬಹುದು‘ ಎಂದು ಹೇಳುವ ಮೂಲಕ ಇರಾನ್‌, ಐರೋಪ್ಯ ಒಕ್ಕೂಟದ ಆಹ್ವಾನವನ್ನು ಭಾನುವಾರ ತಿರಸ್ಕರಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.