ADVERTISEMENT

ಚೀನಾದ 26 ವಿಮಾನಗಳನ್ನು ಅಮಾನತು ಮಾಡಿದ ಅಮೆರಿಕ

ಏಜೆನ್ಸೀಸ್
Published 26 ಆಗಸ್ಟ್ 2022, 11:56 IST
Last Updated 26 ಆಗಸ್ಟ್ 2022, 11:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಕೋವಿಡ್‌ ನಿಗ್ರಹ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಚೀನಾದ26 ಏರ್‌ಲೈನ್ಸ್‌ ವಿಮಾನಗಳನ್ನು ಅಮೆರಿಕ ಸರ್ಕಾರ ಅಮಾನತು ಮಾಡಿದೆ. ಅಮೆರಿಕ ಏರ್‌ಲೈನ್ಸ್‌ ವಿಮಾನಗಳನ್ನು ಚೀನಾ ಅಮಾನತುಗೊಳಿಸಿದ ಬೆನ್ನಲ್ಲೇ ಅಮೆರಿಕ ಸಹ ಅದೇ ರೀತಿ ಪ್ರತ್ಯುತ್ತರ ನೀಡಿದೆ.

ವಿಮಾನಯಾನ ಒಪ್ಪಂದದ ನಿಯಮಗಳನ್ನು ಚೀನಾ ಉಲ್ಲಂಘಿಸುತ್ತಿದೆ. ಕೋವಿಡ್‌ ಪಾಸಿಟಿವ್ ವ್ಯಕ್ತಿಗಳಿರುವ ವಿಮಾನಗಳನ್ನು ಅಮಾನತು ಮಾಡಬೇಕು ಎಂಬ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಅಮೆರಿಕ ಸಾರಿಗೆ ಇಲಾಖೆ ಗುರುವಾರ ದೂರಿದೆ.

ಕೋವಿಡ್‌ ವೈರಸ್‌ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿರುವ ಚೀನಾ ಬಹುತೇಕ ವಿದೇಶಿ ಯಾತ್ರಿಕರಿಗೆ ನಿಷೇಧ ಹೇರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.