ADVERTISEMENT

ಮಂಕಿಪಾಕ್ಸ್‌: ಅಮೆರಿಕದಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಣೆಗೆ ಸಿದ್ಧತೆ

ಏಜೆನ್ಸೀಸ್
Published 5 ಆಗಸ್ಟ್ 2022, 14:06 IST
Last Updated 5 ಆಗಸ್ಟ್ 2022, 14:06 IST
ಮಂಕಿಪಾಂಕ್ಸ್‌
ಮಂಕಿಪಾಂಕ್ಸ್‌    

ವಾಷಿಂಗ್ಟನ್: ದೇಶದಲ್ಲಿ ಮಂಕಿ ಪಾಂಕ್ಸ್‌ ರೋಗ ತೀವ್ರಗತಿಯಲ್ಲಿ ಹರಡಿದ್ದು, ಈಗಾಗಲೇ6,600 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ದೇಶದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿ ಘೋಷಿಸಲು ಅಮೆರಿಕ ಮುಂದಾಗಿದೆ ಎಂದು ಇಬ್ಬರು ವಿಷಯ ತಜ್ಞರು ಹೇಳಿದ್ದಾರೆ.

ಈ ಘೋಷಣೆಯಿಂದವೈರಸ್ ವಿರುದ್ಧ ಹೋರಾಡಲು ಹಣ ಮತ್ತು ಇತರೆ ಸಂಪನ್ಮೂಲ ಲಭಿಸಲಿದೆ.ಚಳಿ, ಜ್ವರ, ಮೈ, ಕೈ ನೋವು, ಚರ್ಮದ ಮೇಲೆ ಗುಳ್ಳೆಗಳು, ಆಯಾಸ– ರೋಗದ ಲಕ್ಷಣಗಳಾಗಿವೆ.

ಮಂಕಿಪಾಕ್ಸ್ ಲಸಿಕೆ ಲಭ್ಯತೆಯ ಬಗ್ಗೆ ಬೈಡನ್‌ ಆಡಳಿತ ಟೀಕೆ ಎದುರಿಸುತ್ತಿರುವ ಕಾರಣ ಈ ಘೋಷಣೆ ಬಂದಿದೆ. ಬೇಡಿಕೆಗೆ ತಕ್ಕಷ್ಟು ಲಸಿಕೆ ಪೂರೈಕೆಯಾಗಿಲ್ಲ ಎಂದುನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ಪ್ರಮುಖ ನಗರಗಳ ಕ್ಲಿನಿಕ್‌ಗಳು ಹೇಳಿದರೆ, ಮತ್ತೆ ‌‌ಕೆಲವು ಮೊದಲ ಡೋಸ್‌ ಪೂರೈಕೆ ಖಚಿತಪಡಿಸಿಕೊಳ್ಳಲು ಎರಡನೇ ಡೋಸ್ ನೀಡುವುದನ್ನು ನಿಲ್ಲಿಸಿವೆ.

ADVERTISEMENT

1.1 ಮಿಲಿಯನ್‌ಗಿಂತಲೂ ಹೆಚ್ಚು ಡೋಸ್‌ ಲಭ್ಯ ಇದೆ. ರೋಗ ನಿರ್ಣಯ ಸಾಮರ್ಥ್ಯವನ್ನು ವಾರಕ್ಕೆ 80 ಸಾವಿರ ಪರೀಕ್ಷೆಗಳಿಗೆ ಹೆಚ್ಚಿಸಲು ಸಹಾಯ ಮಾಡಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.