ADVERTISEMENT

ತೈವಾನ್‌ ಜತೆ ವ್ಯಾಪಾರ ಒಪ್ಪಂದ: ಅಮೆರಿಕ

ಏಜೆನ್ಸೀಸ್
Published 18 ಆಗಸ್ಟ್ 2022, 21:49 IST
Last Updated 18 ಆಗಸ್ಟ್ 2022, 21:49 IST

ಬೀಜಿಂಗ್‌: ತೈವಾನ್‌ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು ಎಂದು ಅಮೆರಿಕ ಘೋಷಿಸಿದೆ. ಈ ಮೂಲಕ ಸ್ವಯಂ ಆಡಳಿತ ಹೊಂದಿರುವ ದ್ವೀಪ ರಾಷ್ಟ್ರ ತೈವಾನ್‌ಗೆ ಅಮೆರಿಕ ಮತ್ತೊಂದು ಬಗೆಯ ಬೆಂಬಲ ವ್ಯಕ್ತಪಡಿಸಿದೆ.

ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ಇತ್ತೀಚೆಗೆ ತೈವಾನ್‌ಗೆ ಭೇಟಿ ನೀಡಿದ್ದನ್ನು ಕಟುವಾಗಿ ವಿರೋಧಿಸಿದ್ದ ಚೀನಾ, ತೈವಾನ್‌ ಸುತ್ತಲಿನ ಸಮುದ್ರದಲ್ಲಿ ಕ್ಷಿಪಣಿ ದಾಳಿ ಜತೆಗೆ ಸೇನಾ ತಾಲೀಮು ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ತೈವಾನ್‌ ಜತೆಗೆ ವ್ಯಾಪಾರ ಸಂಬಂಧ ವೃದ್ಧಿಸುವುದು ಮತ್ತು ಇತರ ಸಹಕಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಗುರುವಾರ ಪ್ರತಿಕ್ರಿಯಿಸಿದರು.

ADVERTISEMENT

ಸದ್ಯ ತೈವಾನ್‌ ಜತೆಗೆ ಅಮೆರಿಕಕ್ಕೆ ಯಾವುದೇ ನೇರ ಸಂಬಂಧ ಇಲ್ಲ. ಆದರೆ ತೈವಾನ್‌ನಲ್ಲಿರುವ ಅಮೆರಿಕನ್‌ ಇನ್‌ಸ್ಟಿಟ್ಯೂಟ್ ಮೂಲಕ ಪರೋಕ್ಷ ಸಂಬಂಧವನ್ನು ಅದು ಸಾಧಿಸಿದೆ. ಅದರ ಮೂಲಕವೇ ಕೃಷಿ, ಕಾರ್ಮಿಕ, ಪರಿಸರ, ಡಿಜಿಟಲ್‌ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ವ್ಯವಹಾರ ಕುದುರಿಸುವ ಬಗ್ಗೆ ಮಾತುಕತೆ ನಡೆಯಲಿದೆ. 1949ರಲ್ಲಿ ಚೀನಾದಿಂದ ಬೇರ್ಪಟ್ಟ ತೈವಾನ್‌ ಬಳಿಕ ಚೀನಾವನ್ನು ಸೇರಿಕೊಂಡೇ ಇಲ್ಲ. ಆದರೆ ತೈವಾನ್ ಯಾವತ್ತಿದ್ದರೂ ತನ್ನ ಭಾಗವೇ ಎಂದು ಚೀನಾ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.