ADVERTISEMENT

ಕಿಮ್‌ ಜಾಂಗ್‌ ಉನ್‌ ಜೊತೆ ಮಾತನಾಡುವ ಬಗ್ಗೆ ಸುಳಿವು ನೀಡಿದ ಡೊನಾಲ್ಡ್‌ ಟ್ರಂಪ್‌

​ಪ್ರಜಾವಾಣಿ ವಾರ್ತೆ
Published 2 ಮೇ 2020, 5:30 IST
Last Updated 2 ಮೇ 2020, 5:30 IST
   

ವಾಷಿಂಗ್ಟನ್‌: ಈ ವಾರಾಂತ್ಯದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್ ಅವರೊಂದಿಗೆ ತಾವು ಮಾತನಾಡಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕಿಮ್‌ ಜಾಂಗ್‌ ಉನ್‌ ಅವರು ಸಾರ್ವಜನಿವಾಗಿ ಕಾಣಿಸಿಕೊಂಡಿದ್ದನ್ನು ಉತ್ತರ ಕೊರಿಯಾ ಮಾಧ್ಯಮಗಳು ಶನಿವಾರ ವರದಿ ಮಾಡಿದ್ದವು. ಆ ಮೂಲಕ ಕಿಮ್‌ ಜಾಂಗ್‌ ಉನ್‌ ಅವರ ಆರೋಗ್ಯದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದವು.

ಕಿಮ್‌ ಜಾಂಗ್‌ ಸಾರ್ವಜನಿಕವಾಗಿ ಪ್ರತ್ಯಕ್ಷರಾದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು' ಈ ವಾರಾಂತ್ಯದಲ್ಲಿ ವಿದೇಶಿ ನಾಯಕರೊಂದಿಗೆ ಫೋನ್‌ ಮೂಲಕ ಕೆಲ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದೇನೆ. ಆ ವೇಳೆ ಕಿಮ್‌ ಜಾಂಗ್‌ ಉನ್‌ ಅವರೊಂದಿಗೆ ನಾನು ಮಾತನಾಡಬಹುದು' ಎಂದು ತಿಳಿಸಿದ್ದಾರೆ.

ಉತ್ತರ ಕೊರಿಯಾದ ಸನ್‌ಚೋನ್‌ ನಗರದಲ್ಲಿ ರಸಗೊಬ್ಬರ ಕಾರ್ಖಾನೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಕಿಮ್‌ ಜಾಂಗ್‌ ಉನ್‌ ಪಾಲ್ಗೊಂಡಿದ್ದು, ಅವರು ರಿಬ್ಬನ್‌ ಕತ್ತರಿಸುವ ಚಿತ್ರವನ್ನು ಉತ್ತರ ಕೊರೊಯಾ ಮಾಧ್ಯಮಗಳು ಬಿಡುಗಡೆ ಮಾಡಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.