ADVERTISEMENT

ನಾನು ನಿರಪರಾಧಿ ಎಂದ ವೆನೆಜುವೆಲಾ ಅಧ್ಯಕ್ಷ ಮಡೂರೊ

ನ್ಯೂಯಾರ್ಕ್‌: ನ್ಯಾಯಾಲಯಕ್ಕೆ ಹಾಜರು, ಹೇಳಿಕೆ ದಾಖಲು

ಏಜೆನ್ಸೀಸ್
Published 5 ಜನವರಿ 2026, 18:49 IST
Last Updated 5 ಜನವರಿ 2026, 18:49 IST
<div class="paragraphs"><p>ನಿಕೊಲಸ್‌ ಮಡೂರೊ</p></div>

ನಿಕೊಲಸ್‌ ಮಡೂರೊ

   

ನ್ಯೂಯಾರ್ಕ್: ‘ನನ್ನ ವಿರುದ್ಧ ಡ್ರಗ್ಸ್‌ ಕಳ್ಳಸಾಗಣೆ ಆರೋಪ ಹೊರಿಸಲಾಗಿದ್ದು, ನನ್ನನ್ನು ಸೆರೆ ಹಿಡಿದು ಇಲ್ಲಿಗೆ ಕರೆದು ತರಲಾಗಿದೆ. ಆದರೆ ನಾನು ನಿರಪರಾಧಿ’ ಎಂದು ನಿಕೊಲಸ್ ಮಡೂರೊ ಸೋಮವಾರ ಹೇಳಿದ್ದಾರೆ.

ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ,‘ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಸಭ್ಯ ವ್ಯಕ್ತಿ. ನಾನು ನನ್ನ ದೇಶದ ಅಧ್ಯಕ್ಷ’ ಎಂದು ಮಡುರೊ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ಮಡೂರೊ ಹಾಗೂ ಅವರ ಪತ್ನಿಯನ್ನು ವೆನೆಜುವೆಲಾದ ಅವರ ನಿವಾಸದಿಂದ ಬಂಧಿಸಿ, ಇಲ್ಲಿಗೆ ಕರೆತಂದ ಬಳಿಕ, ಮಡೂರೊ ಅವರನ್ನು ಇದೇ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಸ್ಪ್ಯಾನಿಷ್‌ನಲ್ಲಿ ಅವರು ನೀಡಿದ ಹೇಳಿಕೆಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಲಾಯಿತು.

ಮಡುರೊ ದಂಪತಿಯನ್ನು ಬ್ರೂಕ್‌ಲಿನ್ ಜೈಲಿನಲ್ಲಿ ಇರಿಸಲಾಗಿದೆ. ಬಿಗಿ ಭದ್ರತೆಯಲ್ಲಿ ಅವರನ್ನು ಇಲ್ಲಿನ ಮ್ಯಾನ್‌ಹಟನ್ ನ್ಯಾಯಾಲಯಕ್ಕೆ ಕರೆತರಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.