ADVERTISEMENT

ಪ್ಯಾಲೆಸ್ಟೀನ್‌ ವಿ.ವಿ ಮೇಲೆ ದಾಳಿ: ಇಸ್ರೇಲ್‌ನಿಂದ ಸ್ಪಷ್ಟನೆ ಕೇಳಿದ ಅಮೆರಿಕ

ಏಜೆನ್ಸೀಸ್
Published 19 ಜನವರಿ 2024, 10:24 IST
Last Updated 19 ಜನವರಿ 2024, 10:24 IST
<div class="paragraphs"><p>ಪ್ಯಾಲೆಸ್ಟೀನ್‌ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌</p></div>

ಪ್ಯಾಲೆಸ್ಟೀನ್‌ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌

   

ಗಾಜಾಪಟ್ಟಿ: ಪ್ಯಾಲೆಸ್ಟೀನ್‌ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬಾಂಬ್‌ ದಾಳಿ ನಡೆಸಿವೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ಮಧ್ಯ ಗಾಜಾಪಟ್ಟಿಯ ಖಾನ್‌ ಯೂನಿಸ್‌ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. 

ADVERTISEMENT

ಪ್ಯಾಲೆಸ್ಟೀನ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ ಎಂದು ಹೇಳಲಾಗುವ ಕಟ್ಟಡ ಸ್ಫೋಟಕ್ಕೊ ಮೊದಲು ಪಾಳು ಬಿದ್ದ ಕಟ್ಟಡ ಎಂಬಂತೆ ಕಾಣುತ್ತದೆ. ಕಟ್ಟಡದ ಒಳಗ ಬಾಂಬ್‌ಗಳನ್ನು ಇಟ್ಟು ಸ್ಫೋಟಿಸಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಹೊರಗಿನಿಂದ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ ಎಂಬುದು ವಿಡಿಯೊ ನೋಡಿದರೆ ತಿಳಿಯುತ್ತದೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಇಸ್ರೇಲ್‌ ಪಡೆಗಳು ಈ ದಾಳಿ ಮಾಡಿವೆ ಎನ್ನಲಾಗುತ್ತಿದೆ. ಈ ಘಟನೆ ಕುರಿತಂತೆ ಅಮೆರಿಕವು ಸ್ಪಷ್ಟನೆ ನೀಡುವಂತೆ ಇಸ್ರೇಲ್‌ ರಾಷ್ಟ್ರವನ್ನು ಕೋರಿದೆ. 

ಇಲ್ಲಿಯವರೆಗೆ ಈ ಘಟನೆ ಬಗ್ಗೆ ಇಸ್ರೇಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.