ADVERTISEMENT

ಭಾರತಕ್ಕೆ ಹಸ್ತಾಂತರ ವಿಜಯ ಮಲ್ಯ ಮನವಿ ತಿರಸ್ಕೃತ

ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು 14 ದಿನಗಳ ಕಾಲಾವಕಾಶ

ಪಿಟಿಐ
Published 20 ಏಪ್ರಿಲ್ 2020, 15:48 IST
Last Updated 20 ಏಪ್ರಿಲ್ 2020, 15:48 IST
ವಿಜಯ ಮಲ್ಯ
ವಿಜಯ ಮಲ್ಯ   

ಲಂಡನ್‌: ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ವಿರುದ್ಧ ಉದ್ಯಮಿ ವಿಜಯ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್‌ ಹೈಕೋರ್ಟ್‌ ತಿರಸ್ಕರಿಸಿದೆ.

ನ್ಯಾಯಾಲಯದ ಈ ಕ್ರಮದಿಂದ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಲ್ಯ ಅವರನ್ನು ಭಾರತಕ್ಕೆ ಕರೆತರುವುದು ಸುಗಮವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಮಲ್ಯ ಅವರಿಗೆ 14 ದಿನಗಳ ಕಾಲಾವಕಾಶವಿದೆ.

ಮಲ್ಯ ಅರ್ಜಿ ಸಲ್ಲಿಸಿದರೆ ಬ್ರಿಟನ್‌ ಗೃಹ ಸಚಿವಾಲಯ ಮುಂದಿನ ಆದೇಶಕ್ಕೆ ಕಾಯಲಿದೆ. ಒಂದು ವೇಳೆ ಅರ್ಜಿ ಸಲ್ಲಿಸದೆ ಇದ್ದರೆ, ಬ್ರಿಟನ್‌ ಮತ್ತು ಭಾರತ ನಡುವೆ ಕೈಗೊಂಡ ಹಸ್ತಾಂತರ ಒಪ್ಪಂದದ ಅನ್ವಯ ನ್ಯಾಯಾಲಯ ಆದೇಶವನ್ನು ಪಾಲಿಸಿ 28
ದಿನಗಳ ಒಳಗೆ ಭಾರತಕ್ಕೆ ಹಸ್ತಾಂತರಿಸಬೇಕಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.