ADVERTISEMENT

ನೈರುತ್ಯ ಚೀನಾದ ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ

ಏಜೆನ್ಸೀಸ್
Published 5 ಏಪ್ರಿಲ್ 2021, 6:06 IST
Last Updated 5 ಏಪ್ರಿಲ್ 2021, 6:06 IST
ಸಾಂದರ್ಭಿಕ ಚಿತ್ರ                                            ಎಎಫ್‌‍ಪಿ ಚಿತ್ರ
ಸಾಂದರ್ಭಿಕ ಚಿತ್ರ                                            ಎಎಫ್‌‍ಪಿ ಚಿತ್ರ   

ಬೀಜಿಂಗ್‌: ಮ್ಯಾನ್ಮಾರ್‌ನ ಗಡಿಯಲ್ಲಿರುವ ನೈರುತ್ಯ ಚೀನಾದ ನಗರವಾದ ರುಯಿಲಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿದೆ.

‘ಇದರ ಬೆನ್ನಲ್ಲೇ ಶುಕ್ರವಾರ ರುಯಿಲಿ ನಗರದಲ್ಲಿ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದ್ದು, ನಗರದ ಎಲ್ಲಾ 3 ಲಕ್ಷ ನಿವಾಸಿಗಳಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

‘ಸೋಮವಾರ ಹೆಚ್ಚುವರಿಯಾಗಿ 20 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಐವರು ಸೋಂಕಿತರಲ್ಲಿ ಯಾವುದೇ ಲಕ್ಷಣಗಳಿರಲಿಲ್ಲ’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ತಿಳಿಸಿದೆ.

ADVERTISEMENT

ರುಯಿಲಿ ನಗರದಲ್ಲಿರುವ ಮ್ಯಾನ್ಮಾರ್‌ನ ಕೆಲವು ಪ್ರಜೆಗಳಲ್ಲೂ ಸೋಂಕು ದೃಢಪಟ್ಟಿದೆ. ಹಾಗಾಗಿ ಇಲ್ಲಿ ಕೆಲಸ ಮಾಡುವ ಮ್ಯಾನ್ಮಾರ್‌ನ ಪ್ರಜೆಗಳಿಗೂ ಉಚಿತ ಕೋವಿಡ್‌ ಲಸಿಕೆಯನ್ನು ನೀಡಲು ಚೀನಾ ನಿರ್ಧರಿಸಿದೆ.

ಈ ನಗರದ ನಿವಾಸಿಗಳಿಗೆ ಮನೆಯಲ್ಲೇ ಉಳಿಯುವಂತೆ ಸೂಚಿಸಲಾಗಿದ್ದು, ಅಗತ್ಯವಲ್ಲದ ಸೇವೆಗಳನ್ನು ಕೂಡ ಮುಚ್ಚಲಾಗಿದೆ. ಅಲ್ಲದೆ ಇಲ್ಲಿ ಭದ್ರತಾ ಕ್ರಮಗಳನ್ನು ಕೂಡ ಬಿಗಿಗೊಳಿಸಲಾಗಿದೆ.

ಚೀನಾದಲ್ಲಿ ಒಟ್ಟು 90,305 ಪ್ರಕರಣಗಳು ವರದಿಯಾಗಿದ್ದು, 4,636 ಮಂದಿ ಸೋಂಕಿನಿಂದ ಮೃತ‍ಪಟ್ಟಿದ್ದಾರೆ. 238 ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.