ADVERTISEMENT

ಅಮೆರಿಕ ಸೇರಿ ಎಲ್ಲ ರಾಷ್ಟ್ರಗಳೊಂದಿಗೆ ಬಾಂಧವ್ಯ ಬಯಸುತ್ತೇವೆ: ತಾಲಿಬಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2021, 9:40 IST
Last Updated 21 ಆಗಸ್ಟ್ 2021, 9:40 IST
ಮುಲ್ಲಾ ಅಬ್ದುಲ್‌ ಘನಿ ಬರದರ್‌
ಮುಲ್ಲಾ ಅಬ್ದುಲ್‌ ಘನಿ ಬರದರ್‌   

ಕಾಬೂಲ್:‌ ಜಗತ್ತಿನ ಎಲ್ಲಾ ರಾಷ್ಟ್ರಗಳೊಂದಿಗೆ, ಮುಖ್ಯವಾಗಿ ಅಮೆರಿಕದೊಂದಿಗೆ ಸಂಬಂಧ ಹೊಂದುವುದನ್ನು ಬಯಸುತ್ತೇವೆ ಎಂದು ತಾಲಿಬಾನ್‌ ಸಂಘಟನೆ ಶನಿವಾರ ತಿಳಿಸಿದೆ.

ʼಇಸ್ಲಾಮಿಕ್‌ ಎಮಿರೇಟ್ಸ್‌ ಆಫ್‌ ಅಫ್ಗಾನಿಸ್ತಾನವು ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ, ಅದರಲ್ಲೂ ಮುಖ್ಯವಾಗಿ ಅಮೆರಿಕದೊಂದಿಗೆ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧ ಹೊಂದುವುದನ್ನು ಬಯಸುತ್ತದೆʼ ಎಂದು ತಾಲಿಬಾನ್‌ ಸಂಘಟನೆಯ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್‌ ಘನಿ ಬರದರ್‌ ಟ್ವಿಟರ್‌ ಮೂಲಕ ತಿಳಿಸಿರುವುದಾಗಿ ಕ್ಸಿನುವಾಸುದ್ದಿ ಸಂಸ್ಥೆ ವರದಿ ಮಾಡಿದೆ.

ʼಅಮೆರಿಕ ಜೊತೆಗೆರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧವನ್ನು ಮುಂದುವರಿಸುವ ಉದ್ದೇಶ ತಾಲಿಬಾನ್‌ಗೆ ಇಲ್ಲʼ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಅಲ್ಲಗಳೆದಿರುವಮುಲ್ಲಾ,ʼನಾವು ಯಾವುದೇ ರಾಷ್ಟ್ರಗಳೊಂದಿಗೆ ವಾಣಿಜ್ಯ ಸಂಬಂಧ ಕಡಿದುಕೊಳ್ಳುವ ಬಗ್ಗೆ ಮಾತನಾಡಿಲ್ಲ. ಈ ಸುದ್ದಿ ಕೇವಲವದಂತಿಯಾಗಿದೆ. ಇದು ಸತ್ಯವಲ್ಲʼ ಎಂದು ಹೇಳಿರುವುದಾಗಿಯೂ ವರದಿಯಾಗಿದೆ.

ADVERTISEMENT

ಬರದರ್‌ ಸದ್ಯ ಕಾಬೂಲ್‌ಗೆ ಆಗಮಿಸಿದ್ದು, ಅಫ್ಗಾನ್‌ನಲ್ಲಿ ಹೊಸ ಸರ್ಕಾರ ರಚಿಸುವ ಕುರಿತು ಅಲ್ಲಿನ ರಾಜಕೀಯ ನಾಯಕರೊಂದಿಗೆ ಔಪಚಾರಿಕ ಮಾತುಕತೆ ಆರಂಭಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.