ADVERTISEMENT

ಲೈಂಗಿಕ ದೌರ್ಜನ್ಯ: ಹಾಲಿವುಡ್ ನಿರ್ಮಾಪಕ ಹಾರ್ವೆ ವೀನ್‌ಸ್ಟೀನ್‌ ದೋಷಿ

ಏಜೆನ್ಸೀಸ್
Published 25 ಫೆಬ್ರುವರಿ 2020, 19:21 IST
Last Updated 25 ಫೆಬ್ರುವರಿ 2020, 19:21 IST

ನ್ಯೂಯಾರ್ಕ್ : ಹಾಲಿವುಡ್‌ನ ಚಿತ್ರ ನಿರ್ಮಾಪಕ ಹಾರ್ವೆ ವೀನ್‌ಸ್ಟೀನ್ ಅವರು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ತೀರ್ಪು ಮಿ ಟೂ ಅಭಿಯಾನಕ್ಕೆ ದೊರೆತ ಭಾಗಶಃ ಗೆಲುವು ಎಂದೇ ವ್ಯಾಖ್ಯಾನಿಸಲಾಗಿದೆ. ತೀರ್ಪು ನೀಡಿದ ಮ್ಯಾನ್‌ ಹ್ಯಾಟನ್‌ನ ನ್ಯಾಯಮೂರ್ತಿ ಜೇಮ್ಸ್‌ ಬರ್ಕ್, ಶಿಕ್ಷೆಯ ಸ್ವರೂಪವನ್ನು ಪ್ರಕಟಿಸಲಿರುವ ಮಾರ್ಚ್‌ 11ರವರೆಗೂ ಅಪರಾಧಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಬೇಕು ಎಂದು ಆದೇಶಿಸಿದರು.

67 ವರ್ಷದ, ಆಸ್ಕರ್ ಪ್ರಶಸ್ತಿ ಪುರಸ್ಕೃತ ನಿರ್ಮಾಪಕರಾದ ವೀನ್‌ಸ್ಟೀನ್‌, ‘ಶೇಕ್‌ಸ್ಪಿಯರ್ ಇನ್‌ ಲವ್’ ಸೇರಿ ಹಲವು ಚಿತ್ರ ನಿರ್ಮಿಸಿದ್ದಾರೆ.

ADVERTISEMENT

ವೀನ್‌ಸ್ಟೀನ್‌ ಪ್ರಕರಣದ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಟೈಮ್ಸ್ಅಪ್‌ ಫೌಂಡೇಷನ್‌ ತೀರ್ಪು ಸ್ವಾಗತಿಸಿದೆ. ದೌರ್ಜನ್ಯ ಎಸಗುವ, ಪ್ರಭಾವಿಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.