ADVERTISEMENT

ಯುರೋಪ್‌ನಲ್ಲಿ ಮಂಕಿಪಾಕ್ಸ್ ನಿಗ್ರಹಕ್ಕೆ ತುರ್ತು ಕ್ರಮ ಕೈಗೊಳ್ಳಿ: ಡಬ್ಲ್ಯುಎಚ್‌ಒ

ಕಳೆದ ಎರಡು ವಾರಗಳಲ್ಲಿ ಸೋಂಕು ಮೂರು ಪಟ್ಟು ಏರಿಕೆ

ಏಜೆನ್ಸೀಸ್
Published 1 ಜುಲೈ 2022, 14:20 IST
Last Updated 1 ಜುಲೈ 2022, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಪನ್‌ಹೇಗನ್ (ಎಎಫ್‌ಪಿ): ಯುರೋಪ್‌ನಲ್ಲಿ ಮಂಕಿ‍ಪಾಕ್ಸ್‌ ಸೋಂಕು ನಿಗ್ರಹಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶುಕ್ರವಾರ ಕರೆ ನೀಡಿದೆ.

ಕಳೆದ ಎರಡು ವಾರಗಳಲ್ಲಿ ಸೋಂಕು ಪ್ರಮಾಣ ಮೂರು ಪಟ್ಟು ಹೆಚ್ಚಾಗಿರುವುದನ್ನು ಉಲ್ಲೇಖಿಸಿ, ‘ಏರುಗತಿಯಲ್ಲಿರುವ ಮಂಕಿಪಾಕ್ಸ್ ನಿಯಂತ್ರಣಕ್ಕೆ ಸರ್ಕಾರ ಮತ್ತು ನಾಗರಿಕ ಸಮಾಜ ಸಂಘಟಿತವಾಗಿ ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದುಯುರೋಪ್‌ನಡಬ್ಲ್ಯುಎಚ್‌ಒದ ಪ್ರಾದೇಶಿಕ ನಿರ್ದೇಶಕ ಹನ್ಸ್‌ ಹೆನ್ರಿ ಕ್ಲುಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT