ADVERTISEMENT

ಕೊರೊನಾ ಹರಡುವಿಕೆ ತಡೆಗೆ ಲಸಿಕೆ ಮಾತ್ರ ಸಾಕಾಗದು: ಡಬ್ಲ್ಯುಎಚ್‌ಒ ಮುಖ್ಯಸ್ಥ

ಏಜೆನ್ಸೀಸ್
Published 17 ನವೆಂಬರ್ 2020, 2:27 IST
Last Updated 17 ನವೆಂಬರ್ 2020, 2:27 IST
ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ –ಎಎಫ್‌ಪಿ ಚಿತ್ರ
ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ –ಎಎಫ್‌ಪಿ ಚಿತ್ರ   

ಜಿನೇವಾ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗೆ ಲಸಿಕೆ ಮಾತ್ರ ಸಾಕಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಸಾಂಕ್ರಾಮಿಕವು ಈಗಾಗಲೇ ತೀವ್ರವಾಗಿ ಹರಡಿದ್ದು, ಈವರೆಗೆ ವಿಶ್ವದಾದ್ಯಂತ 5 ಕೋಟಿಗೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. 13 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

‘ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಕೈಗೊಳ್ಳಲಾಗುತ್ತಿರುವ ಇತರ ಉಪಕ್ರಮಗಳಿಗೆ ಲಸಿಕೆ ಪೂರಕವಾಗಬಹುದು. ಆದರೆ ಪರ್ಯಾಯವಾಗಲಾರದು. ಲಸಿಕೆಯೊಂದರಿಂದಲೇ ಸೋಂಕು ಹರಡುವಿಕೆಯನ್ನು ಸಂಪೂರ್ಣ ತಡೆಯಲಾಗದು’ ಎಂದು ಗೆಬ್ರೆಯೆಸಸ್ ಹೇಳಿದ್ದಾರೆ.

ADVERTISEMENT

ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ವಯಸ್ಸಾದವರು ಮತ್ತು ಹೆಚ್ಚು ಅಪಾಯದಲ್ಲಿರುವ ವ್ಯಕ್ತಿಗಳಿಗಷ್ಟೇ ಲಸಿಕೆ ದೊರೆಯಲಿದೆ. ಅದರಿಂದ ಸಾವಿನ ಸಂಖ್ಯೆ ಕಡಿಮೆಯಾಗಬಹುದು ಮತ್ತು ಆರೋಗ್ಯ ವ್ಯವಸ್ಥೆ ನಿಭಾಯಿಸಲು ಅನುಕೂಲವಾಗಬಹುದು ಆದರೆ, ವೈರಸ್ ಹರಡಲು ಮತ್ತೂ ಅವಕಾಶವಿರುತ್ತದೆ. ಕಣ್ಗಾವಲು ಮುಂದುವರಿಸಬೇಕಾಗುತ್ತದೆ. ಜನರು ಪರೀಕ್ಷೆಗೆ ಒಳಪಡುವುದು, ಪ್ರತ್ಯೇಕ ವಾಸ, ಶುಶ್ರೂಷೆ, ಸಂಪರ್ಕಿತರ ಪತ್ತೆ ಮುಂದುವರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.