ADVERTISEMENT

ಯುರೋಪ್‌ನಲ್ಲಿ ಒಂದು ವಾರದಲ್ಲಿ ಸೋಂಕು ಶೇ 18ರಷ್ಟು ಹೆಚ್ಚಳ: ಡಬ್ಲ್ಯುಎಚ್‌ಒ

ಏಜೆನ್ಸೀಸ್
Published 28 ಅಕ್ಟೋಬರ್ 2021, 8:41 IST
Last Updated 28 ಅಕ್ಟೋಬರ್ 2021, 8:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜಿನಿವಾ: ಕೊರೊನಾ ವೈರಸ್‌ ಸೋಂಕು ಮತ್ತು ಸೋಂಕು ಸಂಬಂಧಿತ ಸಾವುಗಳು ಕಳೆದ ವಾರ ಯೂರೋಪ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

53-ದೇಶಗಳ ಯುರೋಪ್‌ನಲ್ಲಿ ಕಳೆದ ವಾರ ಕೋವಿಡ್‌ ಪ್ರಕರಣಗಳಲ್ಲಿ ಶೇ 18 ರಷ್ಟು ಹೆಚ್ಚಳ ಕಂಡು ಬಂದಿದೆ. ಅಷ್ಟೇ ಅಲ್ಲ. ಸತತ ನಾಲ್ಕನೇ ವಾರವೂ ಸೋಂಕು ಹೆಚ್ಚಳವಾಗಿದೆ ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ.

ಇದೇ ವೇಳೆ ಯುರೋಪ್‌ನಲ್ಲಿ ಕೋವಿಡ್‌ ಸಂಬಂಧಿತ ಸಾವು ಪ್ರಕರಣಗಳಲ್ಲಿಯೂ ಶೇ 14ರಷ್ಟು ಹೆಚ್ಚಳವಾಗಿದೆ.

ADVERTISEMENT

ಕಳೆದ ವಾರ ಅಲ್ಲಿ 16 ಲಕ್ಷ ಪ್ರಕರಣಗಳು ಪತ್ತೆಯಾದರೆ, 21,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಕೋವಿಡ್‌ ಕುರಿತ ಡಬ್ಲ್ಯುಎಚ್‌ಒದ ಸಾಂಕ್ರಾಮಿಕ ರೋಗಶಾಸ್ತ್ರದ ಸಾಪ್ತಾಹಿಕದಲ್ಲಿ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.