ADVERTISEMENT

ಲೈಂಗಿಕ ದುರ್ನಡತೆ: ಡಬ್ಲ್ಯುಎಚ್‌ಒಯಿಂದ ವಿಜ್ಞಾನಿ ವಜಾ

ಪಿಟಿಐ
Published 4 ಮೇ 2023, 15:43 IST
Last Updated 4 ಮೇ 2023, 15:43 IST
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)   

ಜಿನೇವಾ: ಕೋವಿಡ್‌–19 ಸಾಂಕ್ರಾಮಿಕದ ಮೂಲವನ್ನು ಪತ್ತೆಹಚ್ಚುವ ಕೆಲಸಕ್ಕೆ ನಿಯೋಜನೆಗೊಂಡಿದ್ದ ವಿಜ್ಞಾನಿಯೊಬ್ಬರನ್ನು ಲೈಂಗಿಕ ದುರ್ನಡತೆ ಕಾರಣಕ್ಕಾಗಿ ವಜಾಗೊಳಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ವಿಶ್ವಸಂಸ್ಥೆಯ ಆರೋಗ್ಯ ವಿಭಾಗವು ಎರಡು ವರ್ಷದ ಕೆಳಗೆ ಚೀನಾಕ್ಕೆ ಕಳಿಸಿದ್ದ ಉನ್ನತಮಟ್ಟದ ನಿಯೋಗದ ನೇತೃತ್ವವನ್ನು ವಿಜ್ಞಾನಿ ಪೀಟರ್ ಬೆನ್‌ ಎಂಬಾರೆಕ್‌ ವಹಿಸಿದ್ದರು. ಅವರ ವಿರುದ್ಧ ಲೈಂಗಿಕ ದುರ್ನಡತೆ ಆರೋಪಗಳು ಕೇಳಿಬಂದ ಕಾರಣ ಅವರನ್ನು ವಜಾಗೊಳಿಸಲಾಗಿದೆ ಎಂದು ಡಬ್ಲ್ಯುಎಚ್‌ಒ ವಕ್ತಾರೆ ಮಾರ್ಶಿಯಾ ಫೋಲೆ ಇ–ಮೇಲ್‌ ಮೂಲಕ ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯದಂಥ ಪಿಡುಗನ್ನು ಬುಡಸಮೇತ ಕಿತ್ತುಹಾಕುವ ನಿಟ್ಟಿನಲ್ಲಿ ಡಬ್ಲ್ಯುಎಚ್‌ಒ ಕಳೆದ ಕೆಲ ತಿಂಗಳಿಂದ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. 

ADVERTISEMENT

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.