ಜಿನಿವಾ (ರಾಯಿಟರ್ಸ್): ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಬಿಗಿ ನಿರ್ಬಂಧದ ಕಾರಣ ಅಫ್ಗಾನಿಸ್ತಾನಕ್ಕೆ ಈ ವಾರ 500 ಟನ್ ವೈದ್ಯಕೀಯ ನೆರವು ಪೂರೈಸಲು ಆಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ.
ಶಸ್ತ್ರಚಿಕಿತ್ಸಾ ಪರಿಕರಗಳು, ನ್ಯುಮೋನಿಯ ಚಿಕಿತ್ಸೆಗೆ ನೀಡುವ ಔಷಧಗಳನ್ನು ಈ ವಾರ ಪೂರೈಕೆ ಮಾಡಬೇಕಿತ್ತು. ಆದರೆ, ಸದ್ಯ ಕಾಬೂಲ್ನಲ್ಲಿ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಇದೆ. ಈ ಕಾರಣ ಪೂರೈಕೆಯಲ್ಲಿ ಇನ್ನಷ್ಟು ವಿಳಂಬವಾಗಬಹುದು ಎಂದು ಡಬ್ಲ್ಯೂಎಚ್ಒ ವಕ್ತಾರೆ ಇನಾಸ್ ಹಮಾಮ್ ಅವರು ತಿಳಿಸಿದ್ದಾರೆ.
ದುಬೈನಲ್ಲಿ ಇರುವ ತನ್ನ ದಾಸ್ತಾನು ತಾಣಕ್ಕೆ ಈಗ ಈ ಔಷಧೀಯ ಪರಿಕರಗಳನ್ನು ಪೂರೈಸಲು ಖಾಲಿ ವಿಮಾನವನ್ನು ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.