ADVERTISEMENT

ಜಗತ್ತು ಕೆಲ ಕಾಲ ಸಹಜ ಸ್ಥಿತಿಗೆ ಬಾರದು: ಡಬ್ಲ್ಯುಎಚ್‌ಒ ಮುಖ್ಯಸ್ಥ

ಏಜೆನ್ಸೀಸ್
Published 14 ಜುಲೈ 2020, 3:24 IST
Last Updated 14 ಜುಲೈ 2020, 3:24 IST
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್   

ಲಂಡನ್‌: ‘ಸಾಂಕ್ರಾಮಿಕ ರೋಗ ಕೋವಿಡ್‌, ಜಗತ್ತನ್ನು ಕೆಟ್ಟದಾಗಿ ಕಾಡುತ್ತಿದೆ. ನಾವು ಇನ್ನೂ ಸ್ವಲ್ಪ ಸಮಯದವರೆಗೆ ಹಳೆಯ ಸಹಜ ಸ್ಥಿತಿಗೆ,’ ಮರಳಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈ ಮಾತು ಹೇಳಿದರು.

‘ಹಲವಾರು ದೇಶಗಳು, ವಿಶೇಷವಾಗಿ ಯುರೋಪ್ ಮತ್ತು ಏಷ್ಯಾದಲ್ಲಿ ಕೊರೊನಾ ವೈರಸ್‌ ಅನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ, ಬೇರೆ ಅನೇಕ ರಾಷ್ಟ್ರಗಳಲ್ಲಿ ಅದು ಕೆಟ್ಟ ಹಾದಿಯಲ್ಲಿ ಸಾಗುತ್ತಿದೆ,’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಕೊರೊನಾ ವೈರಸ್‌ ಕುರಿತ ಜನರ ನಂಬಿಕೆಗಳಿಗೆ ಭಂಗ ತರುವಂಥ ರಾಜಕೀಯ ನಾಯಕರ ಹೇಳಿಕೆಗಳನ್ನು ಟೆಡ್ರೋಸ್‌ ವಿರೋಧಿಸಿದರು. ಆದರೆ, ಯಾವುದೇ ನಾಯಕರ ಹೆಸರನ್ನೂ ಉಲ್ಲೇಖಿಸಲಿಲ್ಲ.

ಅನೇಕ ದೇಶಗಳಲ್ಲಿ ಏರುತ್ತಿರುವ ಪ್ರಕರಣಗಳನ್ನು ನಿಗ್ರಹಿಸಲು ದೇಶಗಳು ಸಮಗ್ರ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕೆಂದು ಟೆಡ್ರೊಸ್ ಸಲಹೆ ನೀಡಿದರು. ಜಗತ್ತಿನಲ್ಲಿ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳಲ್ಲಿ ಅರ್ಧದಷ್ಟು ಅಮೆರಿಕದಿಂದ ಬರುತ್ತಿರುವುದು ಗಮನಾರ್ಹ.

ಸಾಂಕ್ರಾಮಿಕ ರೋಗಿದಿಂದ ಪಾರಾಗಲೂ ಈಗಲೂ ಮಾರ್ಗಸೂಚಿಗಳಿವೆ. ಸದ್ಯ ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಪ್ರದೇಶಗಳಲ್ಲೂ ಸೋಂಕು ನಿಯಂತ್ರಣಾ ಕ್ರಮಗಳ ಜಾರಿ ವಿಳಂಬವಾಗಿರಲಿಲ್ಲ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.