ADVERTISEMENT

ಪೂರ್ವ ಅಲ್ಜೀರಿಯಾದಲ್ಲಿ ಕಾಳ್ಗಿಚ್ಚು: 26 ಮಂದಿ ಸಾವು

ಏಜೆನ್ಸೀಸ್
Published 18 ಆಗಸ್ಟ್ 2022, 13:05 IST
Last Updated 18 ಆಗಸ್ಟ್ 2022, 13:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಲ್ಜೀರ್ಸ್‌ (ಎಪಿ): ಪೂರ್ವ ಅಲ್ಜೀರಿಯಾದ ಕಾಡುಗಳಲ್ಲಿ ಹಬ್ಬಿರುವ ಕಾಳ್ಗಿಚ್ಚು 26 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಒಳಾಡಳಿತ ಸಚಿವಕಾಮೆಲ್ ಬೆಲ್ಡ್‌ಜೌಡ್ ಹೇಳಿದ್ದಾರೆ.

ಉತ್ತರ ಅಲ್ಜೀರಿಯಾ-ಟ್ಯುನೇಶಿಯಾ ಗಡಿಯ ಸಮೀಪವಿರುವ ಎಲ್ ಟಾರ್ಫ್‌ನ ವಿಲಯಾ ಪ್ರದೇಶದಲ್ಲಿ ಕಾಳ್ಗಿಚ್ಚಿಗೆ 24 ಮಂದಿ ಸತ್ತಿದ್ದಾರೆ. ಸೆಟಿಫ್ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ ಆರಂಭದಿಂದ 3,200 ಹೆಕ್ಟೇರ್‌ನಷ್ಟು ಕಾಡು ಪ್ರದೇಶ ಹಾಗೂ ಹುಲ್ಲುಗಾವಲು ಬೆಂಕಿಯಿಂದ ನಾಶವಾಗಿವೆ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.