ADVERTISEMENT

ನೈಜೀರಿಯಾ: ಗುಂಡಿನ ದಾಳಿಗೆ 37 ಸಾವು 

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 14:31 IST
Last Updated 28 ಸೆಪ್ಟೆಂಬರ್ 2021, 14:31 IST
   

ಲಾಗೋಸ್‌ (ಎಪಿ): ನೈಜೀರಿಯಾದ ಉತ್ತರ ಭಾಗದ ದೂರದ ಗ್ರಾಮವೊಂದರಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 37 ಮಂದಿ ಹತರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಡುನಾ ರಾಜ್ಯದ ಕೌರಾ ಕೌನ್ಸಿಲ್‌ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ರಾಜ್ಯದ ಉತ್ತರ ಭಾಗದಲ್ಲಿ ವಾಸಿಸುವ ಹೌಸಾ–ಫುಲಾನಿ ನಿವಾಸಿಗಳು ಮತ್ತು ದಕ್ಷಿಣದಲ್ಲಿ ಕೇಂದ್ರೀಕೃತವಾಗಿರುವ ಕ್ರಿಶ್ಚಿಯನ್ನರ ನಡುವಿನ ದೀರ್ಘಕಾಲದ ಧಾರ್ಮಿಕ ಬಿಕ್ಕಟ್ಟು ದಾಳಿಗೆ ಕಾರಣ ಎನ್ನಲಾಗಿದೆ.

ಅಪಾರ ಸಂಖ್ಯೆಯ ದಾಳಿಕೋರರು ಬಂದೂಕುಗಳು ಮತ್ತು ಮಾರಕಾಸ್ತ್ರಗಳೊಂದಿಗೆ ಭಾನುವಾರ ಸಂಜೆ ಮಡಮೈ ಗ್ರಾಮಕ್ಕೆ ಬಂದು ಜನರ ಮೇಲೆ ದಾಳಿ ನಡೆಸಿದರು ಎಂದು ದಾಳಿಯಲ್ಲಿ ಗಾಯಗೊಂಡವರ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು ಸುದ್ದಿಸಂಸ್ಥೆಗೆ ತಿಳಿಸಿದರು.

ADVERTISEMENT

‘ಭಾನುವಾರ ನಡೆದ ಘಟನೆಯಲ್ಲಿ 37 ಮಂದಿ ಸಾವನ್ನಪ್ಪಿದ್ದಾರೆ. 35 ಮೃತದೇಹಗಳು ಸ್ಥಳದಲ್ಲೇ ದೊರೆತಿವೆ. ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ’ ಎಂದು ಕೆಫಾಂಚನ್‌ ಜನರಲ್‌ ಆಸ್ಪತ್ರೆಯ ಸ್ಥಳೀಯ ದಾದಿ ಡೆರೆಕ್‌ ಕ್ರಿಸ್ಟೋಫರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.