ADVERTISEMENT

ನ್ಯೂಯಾರ್ಕ್‌: ಹೈದರಾಬಾದ್‌ನ ವಿದ್ಯಾರ್ಥಿಗಾಗಿ ಶೋಧ

ಪಿಟಿಐ
Published 21 ಮಾರ್ಚ್ 2024, 12:49 IST
Last Updated 21 ಮಾರ್ಚ್ 2024, 12:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನ್ಯೂಯಾರ್ಕ್‌: ಈ ತಿಂಗಳ ಆರಂಭದಲ್ಲಿ ಕ್ಲೀವ್‌ಲ್ಯಾಂಡ್‌ನಿಂದ ನಾಪತ್ತೆಯಾಗಿರುವ ಭಾರತ ಮೂಲದ ವಿದ್ಯಾರ್ಥಿಯ ಪತ್ತೆಗಾಗಿ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೆಟ್‌ ಜನರಲ್ ಅವರು ಸ್ಥಳೀಯ ಕಾನೂನು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಹೈದರಾಬಾದ್‌ನ ನಾಚಾರಾಂನ ಮೊಹಮ್ಮದ್‌ ಅಬ್ದುಲ್‌ ಅರ್ಫತ್‌ ಅವರು ಸ್ನಾತಕೊತ್ತರ ಪದವಿಗಾಗಿ 2023ರ ಮೇ ತಿಂಗಳಿನಲ್ಲಿ ಅಮೆರಿಕದ ಕ್ಲೀವ್‌ಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದರು. 

ADVERTISEMENT

‘ಮಾರ್ಚ್ 7ರಂದು ಕೊನೆಯ ಬಾರಿ ಅರ್ಫತ್‌ ನಮ್ಮ ಜೊತೆ ಮಾತನಾಡಿದ್ದು, ಆ ಬಳಿಕ ಅವನು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಮತ್ತು ಅವನ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿದೆ’ ಎಂದು ಅರ್ಫತ್‌ ತಂದೆ ಮಹಮ್ಮದ್‌ ಸಲೀಂ ತಿಳಿಸಿದ್ದಾರೆ.

ಅರ್ಫತ್‌ ಕಾಣೆಯಾಗಿರುವ ಬಗ್ಗೆ ಕ್ಲೀವ್‌ಲ್ಯಾಂಡ್‌ ಪೊಲೀಸರಿಗೆ ದೂರು ಕೊಟ್ಟಿರುವುದಾಗಿ ಆತ ವಾಸವಿದ್ದ ಕೋಣೆಯಲ್ಲಿ ಜೊತೆಗಿದ್ದವರು ಆತನ ತಂದೆಗೆ ಮಾಹಿತಿ ನೀಡಿದ್ದರು. ಅರ್ಫತ್‌ನನ್ನು ಮಾದಕ ವಸ್ತುಗಳ ದಂಧೆ ನಡೆಸುತ್ತಿರುವ ಗುಂಪೊಂದು ಅಪಹರಿಸಿದ್ದು, ಆತನನ್ನು ಬಿಡುಗಡೆ ಮಾಡಬೇಕಾದರೆ ₹99,000($1200) ನೀಡುವಂತೆ ಮಾರ್ಚ್‌ 15 ರಂದು ಅರ್ಫತ್‌ ಕುಟುಂಬಸ್ಥರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಬೇಡಿಕೆ ಇಟ್ಟಿದ್ದ.

‘ಹಣ ನೀಡದಿದ್ದರೆ ಅರ್ಫತ್‌ನ ಕಿಡ್ನಿಯನ್ನು ಮಾರಾಟ ಮಾಡುವುದಾಗಿ ಬೆದರಿಕೆ ಒಡ್ಡಿದ್ದ’ ಎಂದು ಅರ್ಫತ್‌ ತಂದೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.