ADVERTISEMENT

Covid-19 World Update | 25ಲಕ್ಷ ಮಂದಿ ಗುಣಮುಖ; ಸೋಂಕಿತರ ಸಂಖ್ಯೆ 60 ಲಕ್ಷದತ್ತ

ಏಜೆನ್ಸೀಸ್
Published 30 ಮೇ 2020, 16:14 IST
Last Updated 30 ಮೇ 2020, 16:14 IST
   

ವಾಷಿಂಗ್ಟನ್: ಜಗತ್ತಿನಾದ್ಯಂತ ಕೊರೊನಾವೈರಸ್‌ ಸೋಂಕಿತರ ಸಂಖ್ಯೆ ಇದುವರೆಗೆ59.74 ಲಕ್ಷಕ್ಕೆ ಏರಿಕೆಯಾಗಿದ್ದು, 25 ಲಕ್ಷಕ್ಕೂ ಹೆಚ್ಚು ಮಂದಿಗುಣಮುಖರಾಗಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ನೀಡಿದೆ.

25,22,819ಸೋಂಕಿತರು ಇದುವರೆಗೆ ಗುಣಮುಖರಾಗಿದ್ದು,3,65,976 ಮಂದಿ ಮೃತಪಟ್ಟಿದ್ದಾರೆ.

ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 4,65,166ಕ್ಕೆ ಏರಿಕೆಯಾಗಿದ್ದು, 27,878 ಮಂದಿ ಸಾವಿಗೀಡಾಗಿದ್ದಾರೆ. ರಷ್ಯಾದಲ್ಲಿ 3,96,575 ಜನರಿಗೆ ಸೋಂಕು ತಗುಲಿದ್ದು, ಈವರೆಗೆ 4,555 ಮಂದಿ ಮೃತಪಟ್ಟಿದ್ದಾರೆ. ಬ್ರಿಟನ್‌ನಲ್ಲಿ 2,72,615ಜನರಿಗೆ ಕೊರೊನಾ ತಗುಲಿದ್ದು, 38,243 ಮಂದಿ ಕೊನೆಯುಸಿರೆಳೆದಿದ್ದಾರೆ.

ಸೋಂಕಿನಿಂದಾಗಿ ಈವರೆಗೆ ಸ್ಪೇನ್‌ನಲ್ಲಿ 27,121, ಇಟಲಿಯಲ್ಲಿ 33,229, ಫ್ರಾನ್ಸ್‌ನಲ್ಲಿ 28,717 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.