ADVERTISEMENT

Covid-19 World Update | 1.39 ಕೋಟಿ ಸೋಂಕಿತರು, 5.9 ಲಕ್ಷ ಮಂದಿ ಸಾವು

ಏಜೆನ್ಸೀಸ್
Published 17 ಜುಲೈ 2020, 1:18 IST
Last Updated 17 ಜುಲೈ 2020, 1:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ವಾಷಿಂಗ್ಟನ್: ವರ್ಲ್ಡೋಮೀಟರ್ ವೆಬ್‍ಸೈಟ್‌ನ ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ 1,39,31,769 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 5,91,883 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 82,66,378 ಸೋಂಕಿತರು ಗುಣಮುಖರಾಗಿದ್ದಾರೆ.

ವಿಶ್ವದಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 36,89,525 ಸೋಂಕಿತರಿದ್ದು, ಇದುವರೆಗೆ 1,41,043 ಮಂದಿ ಮೃತಪಟ್ಟಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 20,14,738 ಮಂದಿಗೆ ಸೋಂಕು ತಗುಲಿದ್ದು, 76,822 ಮಂದಿ ಸಾವಿಗೀಡಾಗಿದ್ದಾರೆ. ಇತ್ತ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 1,005,637 ಮಂದಿಗೆ ಸೋಂಕು ದೃಢಪಟ್ಟಿದ್ದು, ಈವರೆಗೆ 25,609 ಮಂದಿ ಮೃತರಾಗಿದ್ದಾರೆ.

ADVERTISEMENT

ರಷ್ಯಾದಲ್ಲಿ 7,52,797 ಮಂದಿಗೆ ಸೋಂಕು ತಗುಲಿದ್ದು, 11,937 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.

ನೆರೆ ರಾಷ್ಟ್ರಪಾಕಿಸ್ತಾನದಲ್ಲಿ 2,57,914 ಜನರಿಗೆ ಜನರು ಸೋಂಕಿಗೆ ತುತ್ತಾಗಿದ್ದಾರೆ. ಇವರೆಗೆ 5,426 ಮಂದಿ ಮೃತಪಟ್ಟಿದ್ದಾರೆ. ಇತ್ತ ಬಾಂಗ್ಲಾದೇಶದಲ್ಲಿ 1,96, 323 ಮಂದಿಗೆ ಸೋಂಕು ದೃಢಪಟ್ಟಿದ್ದು, 2, 496 ಮಂದಿ ಸಾವಿಗೀಡಾಗಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.