ADVERTISEMENT

ಜಾಗತಿಕ ಮುಕ್ತ ವ್ಯಾಪಾರ ರಕ್ಷಿಸಲು ನೆರವು: ಜಿನ್‌ಪಿಂಗ್ ಭರವಸೆ

ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಜಿನ್‌ಪಿಂಗ್ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 15:48 IST
Last Updated 31 ಅಕ್ಟೋಬರ್ 2025, 15:48 IST
ಷಿ ಜಿನ್‌ಪಿಂಗ್‌
ಷಿ ಜಿನ್‌ಪಿಂಗ್‌   

ಚಾಂಗ್ಜು: ‘ಜಾಗತಿಕ ಮುಕ್ತ ವ್ಯಾಪಾರವನ್ನು ರಕ್ಷಿಸಲು ಚೀನಾ ನೆರವಾಗಲಿದೆ’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಶುಕ್ರವಾರ ಇಲ್ಲಿ ತಿಳಿಸಿದರು.

ದಕ್ಷಿಣ ಕೊರಿಯಾದ ಚಾಂಗ್ಜು ನಗರದಲ್ಲಿ ನಡೆದ ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಚೀನಾದ ಅಧ್ಯಕ್ಷರು ಈ ಭರವಸೆ ನೀಡಿದರು.

‘ಜಗತ್ತು ಕ್ಷಿಪ್ರ ಬದಲಾವಣೆಗೆ ತೆರೆದುಕೊಂಡಿದೆ. ಅಂತರರಾಷ್ಟ್ರೀಯ ಪರಿಸ್ಥಿತಿಯು ಹೆಚ್ಚು ಸಂಕೀರ್ಣ ಮತ್ತು ಚಂಚಲತೆಯಿಂದ ಕೂಡಿರುವುದರಿಂದ, ನಾವೀಗ ಹೆಚ್ಚು ಒಟ್ಟಿಗೆ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ADVERTISEMENT

‘ಅಮೆರಿಕವು, ಚೀನಾದಿಂದ ಪೂರೈಕೆ ಸರಪಳಿಯನ್ನು ಬೇರ್ಪಡಿಸುವ ಯತ್ನ ನಡೆಸಿದೆ. ಇದಕ್ಕೆ ಪ್ರತಿಯಾಗಿ ನಾವು ಪೂರೈಕೆ ಸರಪಳಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕಿದೆ’ ಎಂದರು.

ಹಸಿರು ಕೈಗಾರಿಕೆಗಳು, ಪರಿಸರಸ್ನೇಹಿ ಇಂಧನ ಕ್ಷೇತ್ರದಲ್ಲಿ ಇತರ ದೇಶಗಳೊಂದಿಗೆ ಕೆಲಸ ಮಾಡುವ ಭರವಸೆಯನ್ನು ನೀಡಿದರು.

ಷಿ ಜಿನ್‌ಪಿಂಗ್‌ ಅವರು 11 ವರ್ಷದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದು, ಸಹಕಾರ ಶೃಂಗದಲ್ಲಿ ಭಾಗಿಯಾಗಿರುವ ಜಪಾನ್, ಕೆನಡಾ, ಥೈಲ್ಯಾಂಡ್‌ ಪ್ರಧಾನಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.