ADVERTISEMENT

ಚೀನಾ ಅಧ್ಯಕ್ಷ ಷಿ ಭೇಟಿಯಿಂದ ರಷ್ಯಾ–ಭಾರತ ಸಂಬಂಧಕ್ಕೆ ಧಕ್ಕೆ ಇಲ್ಲ: ರಾಯಭಾರಿ

ಪಿಟಿಐ
Published 23 ಮಾರ್ಚ್ 2023, 15:43 IST
Last Updated 23 ಮಾರ್ಚ್ 2023, 15:43 IST
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌   

ನವದೆಹಲಿ: ರಷ್ಯಾ ಮತ್ತು ಚೀನಾ ನಡುವಿನ ಸಂಬಂಧವು ರಷ್ಯಾ ಜೊತೆಗಿನ ಭಾರತದ ಸಂಬಂಧಕ್ಕೆ ಧಕ್ಕೆ ತರಲಿದೆ ಎಂಬುದನ್ನು ಭಾರತದಲ್ಲಿನ ರಷ್ಯಾ ರಾಯಭಾರಿ ಡೇನಿಸ್‌ ಅಲಿಪಾವ್‌ ಅವರು ಗುರುವಾರ ತಳ್ಳಿಹಾಕಿದ್ದಾರೆ.

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಬೆನ್ನಲ್ಲೇ ಕೆಲ ಮಾಧ್ಯಮಗಳು ಈ ಭೇಟಿಯು ಭಾರತಕ್ಕೆ ಮಾರಕ ಎಂದು ವಿಶ್ಲೇಷಿಸಿದ್ದವು.

ಈ ವಿಶ್ಲೇಷಣೆಗಳನ್ನು ತಳ್ಳಿಹಾಕಿರುವ ಡೇನಿಸ್‌, ‘ವಿಶ್ಲೇಷಕರ ವಿಶ್ಲೇಷಣೆಯಂತೆ ರಷ್ಯಾ– ಭಾರತ ಸಂಬಂಧಕ್ಕೆ ಯಾವ ಸಮಸ್ಯೆಯೂ ಆಗುವುದಿಲ್ಲ. ಇದು ಕೇವಲ ಅವರ ನಂಬಿಕೆಯಷ್ಟೇ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.