ADVERTISEMENT

ಉಕ್ರೇನ್‌ನ ಕಖೊವ್ಕಾ ಜಲಾಶಯ ಧ್ವಂಸ: ಪ್ರವಾಹದಿಂದ ಐವರ ಸಾವು

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 14:13 IST
Last Updated 8 ಜೂನ್ 2023, 14:13 IST
   

ಕೆರ್ಸಾನ್‌ (ಉಕ್ರೇನ್‌): ಕಖೊವ್ಕಾ ಜಲಾಶಯ ಧ್ವಂಸಗೊಂಡು ಉಂಟಾಗಿರುವ ಭಾರಿ ಪ್ರವಾಹದಲ್ಲಿ ರಷ್ಯಾ ಆಕ್ರಮಿತ ಪ್ರದೇಶದ ಐವರು ನಾಗರಿಕರು ಗುರುವಾರ ಮೃತಪಟ್ಟಿದ್ದಾರೆ.

ಮಂಗಳವಾರ ಅಣೆಕಟ್ಟೆ ಧ್ವಂಸವಾದ ನಂತರ ಪ್ರವಾಹದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ ಎಂದು ನೊವಾ ಕಖೊವ್ಕಾ ನಗರದ ರಷ್ಯಾ ನಿಯೋಜಿತ ಮೇಯರ್ ವ್ಲಾದಿಮಿರ್ ಲಿಯೊಂಚಿಫ್‌ ರಷ್ಯಾದ ಸರ್ಕಾರಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.  

ನೀಪರ್‌ ನದಿ ದಂಡೆಯಲ್ಲಿ ಸೃಷ್ಟಿಯಾಗಿರುವ ಪ್ರವಾಹದಿಂದಾಗಿ ಈವರೆಗೆ ರಷ್ಯಾ ಮತ್ತು ಉಕ್ರೇನ್‌ ನಿಯಂತ್ರಿತ ಪ್ರದೇಶಗಳ ಸುಮಾರು 4 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಗುರುವಾರ ಬೆಳಿಗ್ಗೆ ಪ್ರವಾಹ ಮಟ್ಟ ಸರಾಸರಿ 5.6 ಮೀಟರ್‌ಗೆ ಏರಿಕೆಯಾಗಿದ್ದು, ಸುಮಾರು 600 ಚದರ ಕಿಲೋಮೀಟರ್‌ನಷ್ಟು ಭೂಪ್ರದೇಶ ಪ್ರವಾಹದಲ್ಲಿ ಮುಳುಗಿದೆ ಎಂದು ಪ್ರಾದೇಶಿಕ ಗವರ್ನರ್ ಅಲೆಕ್ಸಾಂಡರ್ ಪ್ರೊಕುದಿನ್ ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.