ADVERTISEMENT

ಸರ್ವಋತು ಸಮ್ಮೊಹಿನಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2013, 19:59 IST
Last Updated 31 ಆಗಸ್ಟ್ 2013, 19:59 IST
ಸರ್ವಋತು ಸಮ್ಮೊಹಿನಿ
ಸರ್ವಋತು ಸಮ್ಮೊಹಿನಿ   

ಹೆಂಡತಿ ಮೋಹವ ಕರಗಿಸಲೆಂದೇ ಹುಟ್ಟಿದಳು ಮಗಳು
ಈ ಭವ ದಾಹವ ಮೆರುಗಿಸಲೆಂದೇ ಹುಟ್ಟಿದಳು ಮಗಳು

ಹೆಣ್ಣಿನ ಮಹತಿಯ ತಿಳಿಸಲು ಎಂದೇ ಹೆಣ್ಣಾದಳು ಮಗಳು
ಪೊರೆಗಳ ಹರಿದು ಹೊಸಲೋಕ ಕಾಣಿಸಿದ ಕಣ್ಣಾದಳು ಮಗಳು

ಮುಗ್ಧತೆ ಬೀಜವ ಮತ್ತೆ ಎದೆ ಹೊಲದಿ ನಾಟಿದಳು ಇವಳು
ಉರುಳಿದ ಬಾಲ್ಯವ ಮರಳಿಸಿ ಹುಚ್ಚನು ಕೆರಳಿಸಿದಳು ಇವಳು

ADVERTISEMENT

ಹಸಿವು, ನಿದ್ದೆ, ನೀರಡಿಕೆಯನೂ ಮರೆಸಿದಳು ಇವಳು
ಕಣ್ಣಿನ ಗಾಯಕೆ ಕನ್ನಡಿ ಹಿಡಿದು ಕಣ್ತೆರಸಿದಳಿವಳು

ನನ್ನ ಜೀವವೇ  ನದಿಯಾದಂತೆ  ಜುಳು ಜುಳು  ಹರಿದಿಹಳು
ನನ್ನನು ಅಪ್ಪನ ಮಾಡಿ ಮೆರೆಯಿಸಿದ ನನ್ನಮ್ಮಳು ಇವಳು                                   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.